Select Your Language

Notifications

webdunia
webdunia
webdunia
webdunia

ಮುಂಬೈ ರೆಸಾರ್ಟ್ ನತ್ತ ಅತೃಪ್ತ ಶಾಸಕರ ಪ್ರಯಾಣ?

ಮುಂಬೈ
ಮೈತ್ರಿ ಪಕ್ಷಗಳು ಹಾಗೂ ಬಿಜೆಪಿ ನಡುವೆ ಈಗ ಶಾಸಕರನ್ನು ಹಿಡಿದಿಟ್ಟುಕೊಳ್ಳುವ ಆಟ ಶುರುವಾಗಿದ್ದು, ರಾಜ್ಯದ ರಾಜಕೀಯದಲ್ಲಿ ಮತ್ತೆ ರೆಸಾರ್ಟ್ ರಾಜಕೀಯ ನುಸುಳಿದೆ.

ಕಾಂಗ್ರೆಸ್ – ಜೆಡಿಎಸ್ ನ 12ಕ್ಕೂ ಹೆಚ್ಚು ಶಾಸಕರು ಬೆಂಗಳೂರಿನಿಂದ ಮುಂಬೈಗೆ ಪ್ರಯಾಣ ಬೆಳೆಸಲಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ. ಕಾಂಗ್ರೆಸ್ – ಜೆಡಿಎಸ್ ನಿಂದ ಒಟ್ಟು 12 ಶಾಸಕರು ರಾಜೀನಾಮೆ ನೀಡಿದ್ದು, ಅವರನ್ನೆಲ್ಲ ಮುಂಬೈಗೆ ಕಳಿಸಲು ಸಿದ್ಧತೆ ನಡೆಯುತ್ತಿದೆ.

ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಸರಕಾರವಿದೆ. ಹೀಗಾಗಿ ಅಲ್ಲಿಗೆ ಇಲ್ಲಿನ ಅತೃಪ್ತ ಶಾಸಕರನ್ನು ಕಳಿಸಿದರೆ ಅವರನ್ನು ಸೆಳೆಯಲು ಬೇರೆಯವರಿಗೆ ಸಾಧ್ಯವಾಗುವುದಿಲ್ಲ ಎಂಬ ಲೆಕ್ಕಾಚಾರ ಇದೆ.

ಈ ನಡುವೆ, ಕಾಂಗ್ರೆಸ್ – ಜೆಡಿಎಸ್ ಶಾಸಕರನ್ನು ಲೆಕ್ಕಕ್ಕೆ ತೆಗೆದುಕೊಳ್ಳದೇ ಹಾಗೂ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದ ಕಾರಣದಿಂದಲೇ ರಾಜೀನಾಮೆ ನೀಡಬೇಕಾಗಿದೆ. ಜನರ ನಿರೀಕ್ಷೆಗಳನ್ನು ತಲುಪಲು ವಿಫಲವಾದ ಕಾರಣದಿಂದಲೇ ರಾಜೀನಾಮೆ ನೀಡಿದ್ದಾಗಿ ಹೆಚ್.ವಿಶ್ವನಾಥ್ ಹೇಳಿದ್ದಾರೆ.

 

Share this Story:

Follow Webdunia kannada

ಮುಂದಿನ ಸುದ್ದಿ

‘ಅನೈತಿಕ ಸಂಬಂಧ ಹಳಸಿದ್ದಕ್ಕೆ ಸರಕಾರ ಬೀಳುತ್ತಿದೆ’