Publish Date: Sat, 06 Jul 2019 (19:44 IST)
Updated Date: Sat, 06 Jul 2019 (19:46 IST)
ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರಕಾರದ ಅಸ್ಥಿರತೆಗೆ ಮಾಜಿ ಮುಖ್ಯಮಂತ್ರಿ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯರ ಕೈವಾಡವಿದೆ. ಹೀಗಂತ ಆರೋಪ ಕೇಳಿಬಂದಿದೆ.
ಮೈತ್ರಿ ಸರಕಾರದ ಅಸ್ಥಿರತೆಯಲ್ಲಿ ಸಿದ್ದರಾಮಯ್ಯನವರ ಕೈವಾಡವಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ದೂರಿದ್ದಾರೆ.
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಕುಟುಂಬ ಅಧಿಕಾರದಲ್ಲಿ ಇರುವುದಕ್ಕೆ ಅವರಿಗೆ ಇಷ್ಟ ಇರಲಿಲ್ಲ. ಅವರೇ ಶಾಸಕರ ರಾಜೀನಾಮೆಯ ಹಿಂದಿರುವ ಸೂತ್ರದಾರರು ಎಂದು ಟೀಕೆ ಮಾಡಿದ್ದಾರೆ.
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಮಂಡಿಸಿರುವ ಬಜೆಟ್ ಪೂರ್ಣ ಓದದೇ ಸಿದ್ದರಾಮಯ್ಯ ಆರೋಪ ಮಾಡಿದ್ದು ಸರಿಯಲ್ಲ ಎಂದು ತಿರುಗೇಟು ನೀಡಿದ್ದಾರೆ.