Select Your Language

Notifications

webdunia
webdunia
webdunia
webdunia

ಬಿಜೆಪಿ ಆಪರೇಷನ್ ಕಮಲಕ್ಕೆ ಸಿಎಂ ಕುಮಾರಸ್ವಾಮಿ ಭರ್ಜರಿ ಪ್ರತಿತಂತ್ರ

ಬಿಜೆಪಿ ಆಪರೇಷನ್ ಕಮಲಕ್ಕೆ ಸಿಎಂ ಕುಮಾರಸ್ವಾಮಿ ಭರ್ಜರಿ ಪ್ರತಿತಂತ್ರ
ಬೆಂಗಳೂರು , ಮಂಗಳವಾರ, 4 ಡಿಸೆಂಬರ್ 2018 (09:30 IST)
ಬೆಂಗಳೂರು: ಮತ್ತೆ ಸಮ್ಮಿಶ್ರ ಸರ್ಕಾರ ಬೀಳಿಸಲು ಆಪರೇಷನ್ ಕಮಲಕ್ಕೆ ತೆರೆಮರೆಯ ಪ್ರಯತ್ನ ನಡೆಸುತ್ತಿರುವ ಬಿಜೆಪಿಗೆ ಸೆಡ್ಡು ಹೊಡೆಯಲು ಸಿಎಂ ಕುಮಾರಸ್ವಾಮಿ ಭರ್ಜರಿ ತಂತ್ರವನ್ನೇ ಹೆಣೆದಿದ್ದಾರೆ.


ಕಾಂಗ್ರೆಸ್ ನ ಅತೃಪ್ತ ಶಾಸಕರನ್ನೇ ಗುರಿಯಾಗಿಸಿ ಬಿಜೆಪಿ ಆಪರೇಷನ್ ಕಮಲಕ್ಕೆ ಮುಂದಾಗಿದೆ. ಇದಕ್ಕೆ ಪ್ರತಿಯಾಗಿ ಈಗ ಸಿಎಂ ಕುಮಾರಸ್ವಾಮಿ ಅಂತಹ ಶಾಸಕರ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನ ನೀಡಲು ಮುಂದಾಗಿದ್ದಾರೆ.

ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನ, ಶಾಸಕರು ಹೇಳಿದ ಅಧಿಕಾರಿಗಳ ವರ್ಗಾವಣೆಗೆ ಮನ್ನಣೆ ನೀಡುವುದು, ಜೆಡಿಎಸ್ ಶಾಸಕರ ಪ್ರಾಬಲ್ಯವಿರುವಲ್ಲಿ ಕಾಂಗ್ರೆಸ್ ಶಾಸಕರು, ನಾಯಕರಿಗೆ ಅವಮಾನವಾಗದಂತೆ ನಡೆದುಕೊಳ್ಳುವ ಇತ್ಯಾದಿ ಭರ್ಜರಿ ತಂತ್ರವನ್ನೇ ಕುಮಾರಸ್ವಾಮಿ ಮಾಡಿದ್ದಾರೆ. ಈ ಮೂಲಕ ಅತೃಪ್ತರು ಬಿಜೆಪಿ ಕಡೆ ವಾಲದಂತೆ ನೋಡಿಕೊಂಡಿದ್ದಾರೆ.

ಯಾವುದೇ ಕಾರಣಕ್ಕೂ ಬಿಜೆಪಿಗೆ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಲು ಸಾಧ್ಯವಾಗದು. ಸಮ್ಮಿಶ್ರ ಸರ್ಕಾರ ಉತ್ತಮವಾಗಿ ನಡೆಯುತ್ತಿದೆ. ಆದರೂ ಬಿಜೆಪಿಯವರು ಸರ್ಕಾರ ಕೆಡವಲು ಷಡ್ಯಂತ್ರ ಮಾಡುತ್ತಿದ್ದಾರೆ ಎಂದು ಸಿಎಂ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ವೈದ್ಯರ ಎಡವಟ್ಟು! ಮಹಿಳೆಯ ಹೊಟ್ಟೆಯೊಳಗೆ ಪತ್ತೆಯಾಗಿದ್ದು ಏನು ಗೊತ್ತಾ?!