ನಾನೊಬ್ಬ ಕಾಂಗ್ರೆಸಿಗ, ನನ್ನ ಪಕ್ಷದ ವಿರೋಧಿಗಳೊಂದಿಗೆ ನಾನೆಂದು ಗುಪ್ತವಾಗಿ ಮಾತನಾಡಿಲ್ಲ- ಶಾಸಕ ಸುಧಾಕರ್

ಮಂಗಳವಾರ, 4 ಡಿಸೆಂಬರ್ 2018 (09:10 IST)
ಬೆಂಗಳೂರು : ಬಿಜೆಪಿ ಸೇರ್ಪಡೆ ಕುರಿತ ವಿಚಾರವಾಗಿ ಮಾತನಾಡಿದ ಚಿಕ್ಕಬಳ್ಳಾಪುರ ಶಾಸಕ ಸುಧಾಕರ್ ನಾನೊಬ್ಬ ಕಾಂಗ್ರೆಸಿಗ, ನನ್ನ ಪಕ್ಷದ ವಿರೋಧಿಗಳೊಂದಿಗೆ ನಾನೆಂದು ಗುಪ್ತವಾಗಿ ಮಾತನಾಡಿಲ್ಲ ಎಂದು ಹೇಳಿದ್ದಾರೆ.


ಈ ವಿಚಾರವಾಗಿ ಟ್ವೀಟ್ ಮಾಡಿರುವ ಶಾಸಕ ಸುಧಾಕರ್ ಅವರು,’ ಮಾಧ್ಯಮಗಳು ಕೇವಲ ಟಿಆರ್ ಪಿ, ವಾಟ್ಸಪ್, ಸುಳ್ಳು ಸುದ್ದಿಗಳನ್ನು ಪ್ರಸಾರ ಮಾಡುತ್ತಿರುವುದು ಬೇಸರ ತಂದಿದೆ. ನಾನೊಬ್ಬ ದೃಢ ಕಾಂಗ್ರೆಸಿಗ, ನಾನು ಕಾಂಗ್ರೆಸ್ ಪಕ್ಷ ಬಿಡುವುದಿಲ್ಲ. ಹಾಗೇ ನಾಯಕರಾದ ಸಿದ್ದರಾಮಯ್ಯನವರ ಬಗ್ಗೆ ತುಚ್ಚವಾಗಿ ಮಾತನಾಡಿದ್ದವನೊಂದಿಗೆ ಯಾವ ಜನ್ಮದಲ್ಲಿಯೂ ಮಾತನಾಡಲಾರೆ ಎಂದು ಹೇಳಿದ್ದಾರೆ.


ನಾನು ಸರ್ವಿಕಲ್ ಡಿಸ್ಕ್ ಬಲ್ಜ್ ಇಂದ ಬಾಧೆಗೊಂಡಿದ್ದೇನೆ ಮತ್ತು ಕೆಲವು ದಿನಗಳಿಂದ ಜಿಂದಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ. ಈ ಸಂದರ್ಭದಲ್ಲಿ ಕೆಲವು ಮಾಧ್ಯಮಗಳು ನಾನು ಜನಾರ್ಧನ ರೆಡ್ಡಿಯನ್ನು ಭೇಟಿಯಾಗಿ ಬಿಜೆಪಿ ಸೇರುವವನಿದ್ದೇನೆ ಎಂದು ಹೇಳುತ್ತಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ. ಹಾಗೇ ಈ ವಿಚಾರ ಸುಳ್ಳು ಎಂಬುದಾಗಿ ಸ್ಪಷ್ಟನೆ ನೀಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಪ್ರಧಾನಿ ಮೋದಿ-ರಾಹುಲ್ ಗಾಂಧಿ ಪರಸ್ಪರ ಜಗಳ್ ಬಂದಿ