Publish Date: Mon, 03 Dec 2018 (12:13 IST)
Updated Date: Mon, 03 Dec 2018 (12:15 IST)
ಬೆಂಗಳೂರು : ಬಿಜೆಪಿ ನಾಯಕರು ಮತ್ತೆ ಅಪರೇಶನ್ ಕಮಲಕ್ಕೆ ಕೈಹಾಕಿದ ಹಿನ್ನಲೆಯಲ್ಲಿ ಇದೀಗ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರಕ್ಕೆ ಮತ್ತೆ ಆಪರೇಶನ್ ಕಮಲದ ಭೀತಿ ಉಂಟಾಗಿದೆ.
ರಾಜ್ಯ ಗುಪ್ತಚರ ಇಲಾಖೆಯ ವರದಿಯಲ್ಲಿ ಸರ್ಕಾರ ಉರುಳಿಸುವ ಬಗ್ಗೆ ಮಾಹಿತಿ ಸಿಕ್ಕಿದ್ದು, ದುಬೈ ಮೂಲದ ಉದ್ಯಮಿ ಜೊತೆ ಶ್ರೀರಾಮುಲು ಆಪ್ತರೊಬ್ಬರ ಅಪರೇಶನ್ ಕಮಲದ ಆಡಿಯೋ ಲಭ್ಯವಾಗಿದೆ. ಈ ಆಡಿಯೋವನ್ನು ಗುಪ್ತಚರ ಇಲಾಖೆ ಸಿಎಂಗೆ ನೀಡಿದೆ.
ಅಲ್ಲದೇ ‘ದೋಸ್ತಿ ಸರ್ಕಾರ ಬೀಳಿಸಲು ಬಿಜೆಪಿ ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿದೆ. ನಿಮ್ಮ ಸರ್ಕಾರ ನೀವಂದುಕೊಂಡಷ್ಟು ಸೇಫ್ ಅಲ್ಲ’ ಎಂದು ರಾತ್ರೋರಾತ್ರಿ ರಾಹುಲ್ ಗಾಂಧಿಗೆ ಕರೆ ಮಾಡಿ ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ. ಗುಪ್ತಚರ ವರದಿ ನೋಡಿ ಕುಮಾರಸ್ವಾಮಿಗೆ ಹಾಗೂ ರಾಹುಲ್ ಗಾಂಧಿಗೆ ಶಾಕ್ ಆಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.