Publish Date: Mon, 03 Dec 2018 (20:05 IST)
Updated Date: Mon, 03 Dec 2018 (20:06 IST)
ಭದ್ರಾ ಮೇಲ್ದಂಡೆ ಯೋಜನೆಯ 50 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಮರು ಶಂಕುಸ್ಥಾಪನೆಗೆ ವಿರೋಧ
ವ್ಯಕ್ತವಾಗಿದೆ.
ಬಿಜೆಪಿ ಕಾರ್ಯಕರು ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ವಾಗ್ವಾದ ನಡೆದಿದೆ. ಸಂಸದೆ ಶೋಭಾ ಕರಂದ್ಲಾಜೆ ಹಾಗೂ ಬಿಜೆಪಿ ಶಾಸಕ ಸುರೇಶ ಎದುರೇ ಎರಡು ಪಕ್ಷದ ಕಾರ್ಯಕರ್ತರ ವಾಗ್ವಾದ ನಡೆದಿದೆ.
ಮಾಜಿ ಕಾಂಗ್ರೆಸ್ ಶಾಸಕ ಶ್ರೀನಿವಾಸ್ ರನ್ನು ಬಂಧಿಸಿದ ಪೊಲೀಸ್ ರ ಕಾರಿನ ಕೆಳಗೆ ಬಿದ್ದು ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಇದರಿಂದಾಗಿ ಕೆಲಕಾಲ ಪರಿಸ್ಥಿತಿ ಉದ್ವಿಗ್ನಗೊಂಡಿತ್ತು. ಪರಿಸ್ಥಿತಿ ಹತೋಟಿಗೆ ತರಲು ಪೊಲೀಸರ ಹರಸಾಹಸ ಮಾಡಬೇಕಾಯಿತು.
ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ನರಸೀಪುರ ಬಳಿ ಘಟನೆ ನಡೆದಿದೆ. ಸಂಸದೆ ಶೋಭಾ ಕರಂದ್ಲಾಜೆ ಹಾಗೂ ಬಿಜೆಪಿ ಶಾಸಕ ಸುರೇಶ ವಿರುದ್ಧ ಮಾಜಿ ಶಾಸಕ ಶ್ರೀನಿವಾಸ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾಜಿ ಕಾಂಗ್ರೆಸ್ ಶಾಸಕ ಶ್ರೀನಿವಾಸ್ ಹಾಗೂ ನೂರಾರು ಕಾಂಗ್ರೆಸ್ ಕಾರ್ಯಕರ್ತರನ್ನು ಬಂಧಿಸಿದ ಪೊಲೀಸರು ಬಳಿಕ ಬಿಡುಗಡೆಗೊಳಿಸಿದರು.