Select Your Language

Notifications

webdunia
webdunia
webdunia
webdunia

ಬಿಜೆಪಿಯಿಂದ ಬರ ಅಧ್ಯಯನ ಪ್ರವಾಸ ಶುರು

ಬಿಜೆಪಿಯಿಂದ ಬರ ಅಧ್ಯಯನ ಪ್ರವಾಸ ಶುರು
ಬೆಂಗಳೂರು , ಭಾನುವಾರ, 2 ಡಿಸೆಂಬರ್ 2018 (15:47 IST)
ಬರ ಪೀಡಿತ ಪ್ರದೇಶಗಳತ್ತ ಬಿಜೆಪಿ ಮುಖಂಡರು ಮುಖ ಮಾಡಿದ್ದಾರೆ. ರಾಜ್ಯದಲ್ಲಿರುವ ಬರ ಪರಿಸ್ಥಿತಿ ಅರಿತು ವರದಿ ಸಿದ್ಧಪಡಿಸಲು ಕಮಲಪಾಳೆಯದಲ್ಲಿ ಆರು ತಂಡಗಲೇ ಸಿದ್ಧಗೊಂಡಿವೆ.

ವಿವಿಧ ಜಿಲ್ಲೆಗಳ ನೂರು ತಾಲ್ಲೂಕುಗಳಲ್ಲಿರುವ ಬರ ಪರಿಸ್ಥಿತಿಯನ್ನು ಅರಿಯಲು ಬಿಜೆಪಿಯ ಆರು ತಂಡಗಳು ಪ್ರವಾಸ ಕೈಗೊಂಡಿವೆ.

ಕೆಲವು ದಿನಗಳ ಹಿಂದೆ ನಡೆದ ಬಿಜೆಪಿ ಪಕ್ಷದ ಶಾಸಕಾಂಗ ಪಕ್ಷದ ಸಭೆಯಲ್ಲಿ ಬರಪೀಡಿತ ಪ್ರದೇಶಗಳ ಅಧ್ಯಯನ ಸಂಬಂಧ ತೀರ್ಮಾನ ತೆಗೆದುಕೊಂಡು ಬರ ಅಧ್ಯಯನಕ್ಕಾಗಿ ಪಕ್ಷದ ವಿವಿಧ ಮುಖಂಡರುಗಳ ಆರು ತಂಡಗಳನ್ನು ರಚಿಸಲಾಗಿತ್ತು. ಅದರಂತೆ ಆರು ತಂಡಗಳು 7 ದಿನಗಳ ಕಾಲ ರಾಜ್ಯದ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡುತ್ತಿವೆ.
ರಾಜ್ಯದ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡುವ ಬಿಜೆಪಿ ನಾಯಕರ ತಂಡ ಅಲ್ಲಿನ ಪರಿಸ್ಥಿತಿ, ಪರಿಹಾರ ಕಾಮಗಾರಿಗಳ ಪ್ರಗತಿ ಎಲ್ಲದರ ಬಗ್ಗೆಯೂ ವರದಿ ಸಿದ್ದಪಡಿಸಲಿವೆ.

ಕೆ.ಎಸ್. ಈಶ್ವರಪ್ಪ ನೇತೃತ್ವದ ತಂಡ ಬೀದರ್, ಕಲಬುರಗಿ, ರಾಯಚೂರು, ಯಾದಗಿರಿ ಹಾಗೂ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳಿಗೆ ಭೇಟಿ ನೀಡಿ ವರದಿ ನೀಡಲಿವೆ.

ಕೇಂದ್ರ ಸಚಿವರಾದ ರಮೇಶ್ ಜಿಗಜಿಣಗಿ, ಸದಾನಂದಗೌಡ, ಮಾಜಿ ಮುಖ್ಯಮಂತ್ರಿ ಜಗದೀಶ್ಶೆಟ್ಟರ್, ಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ್, ವಿಧಾನಪರಿಷತ್ ವಿಪಕ್ಷ ನಾಯಕ ಕೋಟಾ ಶ್ರೀನಿವಾಸಪೂಜಾರಿ ನೇತೃತ್ವದಲ್ಲಿ ಆರು ತಂಡಗಳು ಬರ ಅಧ್ಯಯನಕ್ಕೆ ತೆರಳಿವೆ.

ಕೇಂದ್ರ ಸಚಿವ ಸದಾನಂದಗೌಡ ನೇತೃತ್ವದ ತಂಡ ಅತಿವೃಷ್ಠಿ ಪೀಡಿತ ಕೊಡಗು ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ನಂತರ ಕೊಡಗಿನ ಸ್ಥಿತಿಗತಿಗಳನ್ನು ಅವಲೋಕಿಸಲಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಕಾಗೆಗೆ ಮುಕ್ತಿಕೊಟ್ಟ ಪಕ್ಷಿ ಪ್ರೇಮಿಗಳು