Publish Date: Sun, 02 Dec 2018 (09:46 IST)
Updated Date: Sun, 02 Dec 2018 (09:48 IST)
ನವದೆಹಲಿ: ಪ್ರಧಾನಿ ಮೋದಿ ಯಾವ ರೀತಿಯ ಹಿಂದೂ? ಹೀಗಂತ ಸಂವಾದ ಕಾರ್ಯಕ್ರಮವೊಂದರಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ಪ್ರಧಾನಿ ಮೋದಿ ವಿರುದ್ಧ ಟೀಕಾಪ್ರಹಾರ ನಡೆಸಿದ ರಾಹುಲ್ ‘ಮೋದಿ ತಾವು ಅಪ್ಪಟ ಹಿಂದೂ ಎನ್ನುತ್ತಾರೆ. ಆದರೆ ಅವರಿಗೆ ಹಿಂದೂ ತತ್ವದ ಮೂಲವೇ ಗೊತ್ತಿಲ್ಲ. ಅವರು ಯಾವ ಸೀಮೆ ಹಿಂದೂ?’ ಎಂದು ಪ್ರಶ್ನಿಸಿದ್ದಾರೆ.
ಇನ್ನು, ಸರ್ಜಿಕಲ್ ಸ್ಟ್ರೈಕ್ ಬಗ್ಗೆಯೂ ಕೇಂದ್ರದ ಬಿಜೆಪಿ ಸರ್ಕಾರವನ್ನು ಲೇವಡಿ ಮಾಡಿರುವ ರಾಹುಲ್ ‘ನಿಮಗೆ ಗೊತ್ತಾ? ಮನಮೋಹನ್ ಸಿಂಗ್ ತಮ್ಮ ಅವಧಿಯಲ್ಲಿ ಮೂರು ಬಾರಿ ಸರ್ಜಿಕಲ್ ಸ್ಟ್ರೈಕ್ ನಡೆಸಿದ್ದಾರೆ. ಸೇನಾಧಿಕಾರಿಗಳು ಅವರ ಬಳಿ ಬಂದು ಪಾಕಿಸ್ತಾನಕ್ಕೆ ತಿರುಗೇಟು ನೀಡಬೇಕೆಂದು ಕೇಳಿಕೊಂಡಿದ್ದರು. ಅಲ್ಲದೆ, ಅದನ್ನು ರಹಸ್ಯವಾಗಿಯೇ ಇರಿಸಿದ್ದರು. ನಮ್ಮ ಸ್ವಹಿತಕ್ಕೆ ಇದನ್ನು ಪ್ರಚಾರ ಮಾಡಿಕೊಂಡು ಬಂದಿಲ್ಲ ಅಷ್ಟೆ’ ಎಂದು ರಾಹುಲ್ ಹೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ