Select Your Language

Notifications

webdunia
webdunia
webdunia
webdunia

ಅಮ್ಮನ ಸೀರೆಯೇ ಮಕ್ಕಳ ಪಾಲಿಗೆ ಮರಣದ ಉರುಳಾಯ್ತು

ಅಮ್ಮನ ಸೀರೆಯೇ ಮಕ್ಕಳ ಪಾಲಿಗೆ ಮರಣದ ಉರುಳಾಯ್ತು
ಕೊಡಗು , ಗುರುವಾರ, 1 ಜುಲೈ 2021 (10:06 IST)
ಕೊಡಗು: ಜೋಕಾಲಿ ಆಡುವಾಗ ಸೀರೆ ಉರುಳಾಗಿ ಇಬ್ಬರು ಮಕ್ಕಳು ಧಾರುಣ ಸಾವನ್ನಪ್ಪಿದ ಘಟನೆ ಕೊಡಗು ಜಿಲ್ಲೆಯಲ್ಲಿ ಸಂಭವಿಸಿದೆ.


ಅಮ್ಮನ ಸೀರೆ ಬಳಸಿ ಜೋಕಾಲಿಯಾಡುತ್ತಿದ್ದಾಗ 14 ವರ್ಷದ ಪುತ್ರಿ ಮಣಿಕ್ ಶಾ ಮತ್ತು 12 ವರ್ಷದ ಪುತ್ರ ಪೂರ್ಣೇಶ್ ಅಕಸ್ಮಾತ್ತಾಗಿ ಸಾವಿಗೀಡಾಗಿದ್ದಾರೆ. ಈ ವೇಳೆ ಮನೆಯಲ್ಲಿ ಬೇರೆ ಯಾರೂ ಇರಲಿಲ್ಲವೆನ್ನಲಾಗಿದೆ.

ಕೆಲಸಕ್ಕೆ ತೆರಳಿದ್ದ ತಾತ ಮನೆಗೆ ಬಂದಾಗ ಅಕ್ಕ ಮತ್ತು ತಮ್ಮ ಇಬ್ಬರೂ ನೇಣು ಬಿಗಿದ ಸ್ಥಿತಿಯಲ್ಲಿದ್ದರು. ಜೋಕಾಲಿಯಾಡುತ್ತಿದ್ದ ಅಮ್ಮನ ಸೀರೆಯೇ ಈ ಮಕ್ಕಳಿಗೆ ಉರುಳಾಗಿ ಪರಿಣಮಿಸಿದೆ.  ಇದೀಗ ಸೋಮಾರಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವೈದ್ಯರ ದಿನಾಚರಣೆ: ಸೆಲೆಬ್ರಿಟಿಗಳಿಂದ ಶುಭಾಶಯ