Publish Date: Thu, 01 Jul 2021 (09:45 IST)
Updated Date: Thu, 01 Jul 2021 (09:53 IST)
ಬೆಂಗಳೂರು: ಇಂದು ನಮ್ಮೆಲ್ಲರ ಪ್ರಾಣ ಉಳಿಸುವ ಪ್ರತ್ಯಕ್ಷ ದೇವರು ವೈದ್ಯರ ದಿನಾಚರಣೆ. ಈ ದಿನಕ್ಕೆ ಸೆಲೆಬ್ರಿಟಿಗಳು ಸಾಮಾಜಿಕ ಜಾಲತಾಣದ ಮೂಲಕ ಶುಭಾಶಯ ಕೋರಿದ್ದಾರೆ.
ನಟ ರಮೇಶ್ ಅರವಿಂದ್, ನಟಿ ತಾರಾ ವಿಶೇಷ ವಿಡಿಯೋ ಮೂಲಕ ವೈದ್ಯರ ದಿನಾಚರಣೆಗೆ ಶುಭಾಶಯ ಕೋರಿರುವುದರ ಜೊತೆಗೆ ವೈದ್ಯರ ಮೇಲಿನ ಹಲ್ಲೆ ನಿಲ್ಲಲಿ ಎಂದು ಕರೆ ನೀಡಿದ್ದಾರೆ.
ಇನ್ನು, ಟೆನಿಸ್ ತಾರೆ ಸಾನಿಯಾ ಮಿರ್ಜಾ ಅಂತಾರಾಷ್ಟ್ರೀಯ ವೈದ್ಯರ ದಿನಕ್ಕೆ ಶುಭ ಕೋರಿರುವದರ ಜೊತೆಗೆ ವೈದ್ಯರನ್ನೂ ಮಾನವೀಯತೆಯಿಂದ ನೋಡಿ ಎಂದು ಕರೆ ನೀಡಿದ್ದಾರೆ. ನಟ ಆರ್ ಮಾಧವನ್ ಕೂಡಾ ವೈದ್ಯರ ದಿನಾಚರಣೆಗೆ ಶುಭ ಕೋರಿದ್ದಾರೆ.