Publish Date: Mon, 28 Jun 2021 (11:50 IST)
Updated Date: Mon, 28 Jun 2021 (11:52 IST)
ಬೆಂಗಳೂರು: ಬಾಲ್ಯ ವಿವಾಹ ಪದ್ಧತಿಯಲ್ಲಿ ಹೆಚ್ಚಾಗಿ ಬಾಲಕಿಯರು ಬಲಿಯಾಗುವುದು ನೋಡಿದ್ದೇವೆ. ಆದರೆ ಇಲ್ಲಿ 20 ವರ್ಷದ ಯುವತಿಯೊಬ್ಬಾಕೆ 17 ವರ್ಷದ ಅಪ್ರಾಪ್ತ ಬಾಲಕನನ್ನು ವಿವಾಹವಾದ ಘಟನೆ ನಡೆದಿದೆ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಈ ಘಟನೆ ನಡೆದಿದ್ದು, ಇದೀಗ ಯುವತಿ ಹಾಗೂ ಮನೆಯವರ ವಿರುದ್ಧ ಪ್ರಕರಣ ದಾಖಲಾಗಿದೆ.
ಫೇಸ್ ಬುಕ್ ಮುಖಾಂತರ ಚಿಕ್ಕಮಗಳೂರು ಮೂಲದ ಅಪ್ರಾಪ್ತ ಯುವಕನ ಪರಿಚಯವಾಗಿತ್ತು. ಇದೀಗ ಯುವತಿ ದೇವಾಲಯವೊಂದರಲ್ಲಿ ಯುವಕನ ಮನೆಯವರ ಸಮ್ಮುಖದಲ್ಲೇ ವಿವಾಹವಾಗಿದ್ದಾಳೆಂದು ತಿಳಿದುಬಂದಿದೆ. ಆದರೆ ಇದು ಸ್ಥಳೀಯರ ಗಮನಕ್ಕೆ ಬಂದಿದ್ದು, ಪೊಲೀಸರಿಗೆ ದೂರು ನೀಡಿದ್ದಾರೆ.