Publish Date: Sat, 26 Jun 2021 (13:06 IST)
Updated Date: Sat, 26 Jun 2021 (10:57 IST)
ಅಹಮ್ಮದಾಬಾದ್: ಅಶ್ಲೀಲ ಫೋಟೋಗಳನ್ನು ತೋರಿಸಿ ಗೆಳತಿಗೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಗುಜರಾತ್ ನ 29 ವರ್ಷದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
29 ವರ್ಷದ ಜಗದೀಶ್ ಸಿಂಘ ಎಂಬಾತ ಬಂಧಿತ. ಇಬ್ಬರೂ ಸೋಷಿಯಲ್ ಮೀಡಿಯಾ ಮೂಲಕ ಪರಿಚಿತರಾಗಿದ್ದರು. ಇಬ್ಬರ ನಡುವೆ ಪ್ರೀತಿ ಸಂಬಂಧವಿತ್ತು. ಈ ವೇಳೆ ಆರೋಪಿ ಗೆಳತಿಗೆ ವಿಡಿಯೋ ಕಾಲ್ ಮಾಡುವ ನಗ್ನಳಾಗಿ ಎದುರು ಬರುವಂತೆ ಕೇಳಿಕೊಳ್ಳುತ್ತಿದ್ದ.
ಇತ್ತೀಚೆಗೆ ಯುವತಿ ಆರೋಪಿಯ ಜೊತೆ ಸಂಬಂಧ ಕಡಿದುಕೊಂಡಿದ್ದಲ್ಲದೆ, ಸೋಷಿಯಲ್ ಮೀಡಿಯಾದಲ್ಲೂ ಅನ್ ಫ್ರೆಂಡ್ ಮಾಡಿದ್ದಳು. ಅದಾದ ಬಳಿಕ ಹಿಂದೆ ರೆಕಾರ್ಡ್ ಮಾಡಿಕೊಂಡಿದ್ದ ಆಕೆಯ ವಿಡಿಯೋ, ಫೋಟೋಗಳನ್ನು ತೋರಿಸಿ 50 ಸಾವಿರ ರೂ. ನೀಡದೇ ಇದ್ದರೆ ವಿಡಿಯೋ ಬಹಿರಂಗಪಡಿಸುವುದಾಗಿ ಬೆದರಿಕೆ ಹಾಕುತ್ತಿದ್ದ. ಈ ಸಂಬಂಧ ಯುವತಿ ಪೊಲೀಸರಿಗೆ ದೂರು ನೀಡಿದ್ದಳು. ಅದರಂತೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.