Publish Date: Mon, 28 Jun 2021 (09:48 IST)
Updated Date: Mon, 28 Jun 2021 (09:50 IST)
ನವದೆಹಲಿ: ಕೊರೋನಾ ವ್ಯಾಕ್ಸಿನ್ ಬಗ್ಗೆ ಇಲ್ಲಸಲ್ಲದ ವದಂತಿಗಳಿಗೆ ಕಿವಿಗೊಡಬೇಡಿ. ಕೊರೋನಾದಿಂದ ರಕ್ಷಿಸಿಕೊಳ್ಳಿ ಎಂದು ಪ್ರಧಾನಿ ಮೋದಿ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಕರೆ ಕೊಟ್ಟಿದ್ದಾರೆ.
ವ್ಯಾಕ್ಸಿನ್ ಎಷ್ಟು ಸೇಫ್ ಎನ್ನುವುದಕ್ಕೆ ನನ್ನ 101 ವರ್ಷದ ಅಮ್ಮನೇ ಸಾಕ್ಷಿ. ನಾನು, ನನ್ನ ತಾಯಿಗೂ ಎರಡು ಡೋಸ್ ಲಸಿಕೆ ಪೂರ್ತಿಯಾಗಿದೆ. 100 ವರ್ಷ ಮೇಲ್ಪಟ್ಟ ನನ್ನಮ್ಮ ಈಗಲೂ ಚೆನ್ನಾಗಿದ್ದಾರೆ. ಹೀಗಾಗಿ ವ್ಯಾಕ್ಸಿನ್ ಬಗ್ಗೆ ಇರುವ ವದಂತಿಗಳಿಗೆ ಕಿವಿಗೊಡಬೇಡಿ. ಇದು ಸುರಕ್ಷಿತ ಎಂದು ಪ್ರಧಾನಿ ಮೋದಿ ಮನ್ ಕೀ ಬಾತ್ ನಲ್ಲಿ ಹೇಳಿದ್ದಾರೆ.
ವಿಜ್ಞಾನವನ್ನು ನಂಬಿ. ನಮ್ಮ ವಿಜ್ಞಾನಿಗಳನ್ನು ನಂಬಿ. ಈಗಾಗಲೇ ಹಲವು ಮಂದಿಗೆ ಲಸಿಕೆ ಪಡೆದು ಸುರಕ್ಷಿತವಾಗಿದ್ದಾರೆ. ಹೀಗಾಗಿ ಲಸಿಕೆ ಪಡೆದುಕೊಳ್ಳಿ ಎಂದಿದ್ದಾರೆ.