Publish Date: Sun, 27 Jun 2021 (10:56 IST)
Updated Date: Sun, 27 Jun 2021 (09:19 IST)
ನವದೆಹಲಿ: ಕೊರೋನಾ ಎರಡನೇ ಅಲೆ ಸಂದರ್ಭದಲ್ಲಿ ದೆಹಲಿಗೆ ಅಗತ್ಯಕ್ಕಿಂತ ಹೆಚ್ಚು ಆಕ್ಸಿಜನ್ ಪಡೆದುಕೊಂಡರು ಎಂಬ ಆರೋಪ ಎದರಿಸುತ್ತಿರುವ ಸಿಎಂ ಅರವಿಂದ್ ಕೇಜ್ರಿವಾಲ್ ಅದನ್ನು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ.
ಹೌದು, ನಾನು ನಾಟಕ ಮಾಡಿದ್ದೆ. ಆದರೆ ದೆಹಲಿಯ 2 ಕೋಟಿ ಜನರ ಪ್ರಾಣ ರಕ್ಷಣೆಗಾಗಿ ಈ ನಾಟಕ ಮಾಡಿದೆ. ಎಲ್ಲರೂ ಚುನಾವಣೆ ಪ್ರಚಾರದಲ್ಲಿ ಮೈಮರೆತಿದ್ದಾಗ ನಾನು ನಿದ್ರೆಗೆಟ್ಟು ಜನರ ಪ್ರಾಣ ಉಳಿಸಲು ಆಕ್ಸಿಜನ್ ವ್ಯವಸ್ಥೆ ಮಾಡುತ್ತಿದ್ದೆ ಎಂದಿದ್ದಾರೆ.
ದೆಹಲಿ ಅಗತ್ಯಕ್ಕಿಂತಲೂ ನಾಲ್ಕು ಪಟ್ಟು ಹೆಚ್ಚು ಆಕ್ಸಿಜನ್ ಕೇಂದ್ರದಿಂದ ಪಡೆದುಕೊಂಡಿತ್ತು ಎಂದು ಸುಪ್ರೀಂ ಕೋರ್ಟ್ ನಿಯಮಿತ ಕೇಂದ್ರ ಸಮಿತಿ ವರದಿ ಮಾಡಿತ್ತು.