Select Your Language

Notifications

webdunia
webdunia
webdunia
webdunia

ಜಮ್ಮು ಕಾಶ್ಮೀರದಲ್ಲೂ ಚುನಾಯಿತ ಸರ್ಕಾರ

ಜಮ್ಮು ಕಾಶ್ಮೀರದಲ್ಲೂ ಚುನಾಯಿತ ಸರ್ಕಾರ
ನವದೆಹಲಿ , ಶುಕ್ರವಾರ, 25 ಜೂನ್ 2021 (16:56 IST)
ನವದೆಹಲಿ: ಆರ್ಟಿಕಲ್ 370 ರದ್ದತಿ ಬಳಿಕ ಇದೇ ಮೊದಲ ಬಾರಿಗೆ ಜಮ್ಮು ಮತ್ತು ಕಾಶ್ಮೀರದ ರಾಜಕೀಯ ನಾಯಕರೊಂದಿಗೆ ಸಭೆ ನಡೆಸಿದ ಪ್ರಧಾನಿ ಮೋದಿ ಚುನಾವಣೆ ಬಗ್ಗೆ ಒಲವು ತೋರಿದ್ದಾರೆ.


ಜಮ್ಮು ಕಾಶ್ಮೀರಕ್ಕೆ ಚುನಾಯಿತ ಸರ್ಕಾರದ ಅಗತ್ಯವಿದೆ. ಹೀಗಾಗಿ ಶೀಘ‍್ರದಲ್ಲೇ ಚುನಾವಣೆ ನಡೆಸಲು ಎಲ್ಲರೂ ಒಟ್ಟು ಸೇರೋಣ ಎಂದು ಮೋದಿ ಕರೆಕೊಟ್ಟಿದ್ದಾರೆ. ಆದರೆ ಚುನಾವಣೆ ನಡೆಸಲು ಅವಸರವೂ ಮಾಡುವಂತಿಲ್ಲ ಎಂದಿದ್ದಾರೆ.

ಜಮ್ಮು ಕಾಶ್ಮೀರದಲ್ಲಿ ಪ್ರಜಾಪ್ರಭುತ್ವ ಬಲಪಡಿಸುವುದೇ ನಮ್ಮ ಗುರಿ. ಇದಕ್ಕಾಗಿ ಇಲ್ಲಿ ಚುನಾವಣೆ ನಡೆದು ಸರ್ಕಾರ ಸ್ಥಾಪನೆಯಾಗಬೇಕು ಎಂದಿದ್ದಾರೆ. ಆದರೆ ಪ್ರಧಾನಿ ಮಾತಿಗೆ ಟಾಂಗ್ ಕೊಟ್ಟಿರುವ ಕಾಂಗ್ರೆಸ್ ನಾಯಕ ಪಿ ಚಿದಂಬರಂ ಮೊದಲು ಅಲ್ಲಿಗೆ ರಾಜ್ಯದ ಸ್ಥಾನ ಮಾನ ನೀಡಿ, ಆ ಬಳಿಕ ಚುನಾವಣೆಯ ಮಾತನಾಡಿ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಗೋವಾ ಪ್ರವಾಸ ಮಾಡಬೇಕೆಂದಿದ್ದಾರಾ? ಹಾಗಿದ್ದರೆ ಇನ್ನು ಇದು ಕಡ್ಡಾಯ!