Publish Date: Fri, 25 Jun 2021 (14:56 IST)
Updated Date: Fri, 25 Jun 2021 (09:58 IST)
ಪಣಜಿ: ದೇಶದಲ್ಲಿ ಕೊರೋನಾ ಭೀತಿ ಮನೆ ಮಾಡಿದೆ. ಈ ನಡುವೆ ಲಸಿಕೆ ಕಾರ್ಯವೂ ಭರದಿಂದ ಸಾಗುತ್ತಿದೆ. ಇದೀಗ ಗೋವಾ ಸರ್ಕಾರ ಇದೇ ನಿಟ್ಟಿನಲ್ಲಿ ತನ್ನ ರಾಜ್ಯಕ್ಕೆ ಪ್ರವಾಸ ಬರುವವರಿಗೆ ವಿಶೇಷ ಷರತ್ತು ವಿಧಿಸಿದೆ.
ಇನ್ನು ಮುಂದೆ ಗೋವಾ ರಾಜ್ಯ ಎಂಟ್ರಿ ಕೊಡಬೇಕೆಂದರೆ ಎರಡು ಹಂತದ ಲಸಿಕೆ ಪಡೆದಿರಬೇಕು ಎಂದು ಗೋವಾ ಸಿಎಂ ಪ್ರಮೋದ್ ಸಾವಂತ್ ಹೇಳಿದ್ದಾರೆ.
ಸದ್ಯಕ್ಕೆ ರಾಜ್ಯದಲ್ಲಿ ಡೆಲ್ಟಾ ಪ್ಲಸ್ ತಳಿಯ ಕೊರೋನಾ ಕಂಡುಬಂದಿಲ್ಲ. ಮುಂದಿನ ದಿನಗಳಲ್ಲಿ ಮೂರನೇ ಅಲೆ ಬರುವ ಸಾಧ್ಯತೆಯಿರುವುದರಿಂದ ಗೋವಾ ಸರ್ಕಾರ ಈಗಿನಿಂದಲೇ ಕಠಿಣ ನಿಯಮ ಜಾರಿಗೆ ತರುವುದಾಗಿ ಸಿಎಂ ಹೇಳಿದ್ದಾರೆ.