Publish Date: Fri, 25 Jun 2021 (14:00 IST)
Updated Date: Fri, 25 Jun 2021 (09:54 IST)
ರಾಮನಗರ: ಕೊರೋನಾ ಹಾವಳಿ ನಡುವೆ ಸಕ್ರಿಯ ರಾಜಕೀಯದಿಂದ ಕೊಂಚ ಬ್ರೇಕ್ ಪಡೆದಿರುವ ಮಾಜಿ ಸಿಎಂ ಕುಮಾರಸ್ವಾಮಿ ಕೃಷಿ ಕೆಲಸಗಳಲ್ಲಿ ಫುಲ್ ಬ್ಯುಸಿಯಾಗಿದ್ದಾರೆ.
ಕೇತಗನಹಳ್ಳಿಯಲ್ಲಿರುವ ತಮ್ಮ ತೋಟದ ಮನೆಯಲ್ಲಿ ಕುಮಾರಸ್ವಾಮಿ ಕಳೆ ಕೀಳುವುದರಿಂದ ಹಿಡಿದು, ಜಾನುವಾರಗಳ ಪಾಲನೆವರೆಗೆ ಕೃಷಿ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕಳೆದ ಕೆಲವು ದಿನಗಳಿಂದ ಕುಮಾರಸ್ವಾಮಿ ತಮ್ಮ ಕುಟುಂಬ ಸಮೇತ ತೋಟದ ಮನೆಯಲ್ಲಿಯೇ ಇದ್ದಾರೆ.
ಇದೀಗ ಕುಮಾರಸ್ವಾಮಿ ತಮ್ಮ ತೋಟದಲ್ಲಿರುವ ಕೃಷಿ ಹೊಂಡದಲ್ಲಿ ಮೀನು ಸಾಕಣಿಕೆ ಮಾಡಲು ಮೀನುಗಳನ್ನು ಬಿಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.