Select Your Language

Notifications

webdunia
webdunia
webdunia
webdunia

ರಾಜ್ಯಕ್ಕೂ ಎದುರಾಗಿದೆ ಡೆಲ್ಟಾ ಪ್ಲಸ್ ಭೀತಿ

ರಾಜ್ಯಕ್ಕೂ ಎದುರಾಗಿದೆ ಡೆಲ್ಟಾ ಪ್ಲಸ್ ಭೀತಿ
ಬೆಂಗಳೂರು , ಗುರುವಾರ, 24 ಜೂನ್ 2021 (09:31 IST)
ಬೆಂಗಳೂರು: ಕೊರೋನಾ ಎರಡನೇ ಅಲೆಯಿಂದ ಚೇತರಿಸಿಕೊಳ್ಳುತ್ತಿರುವ ರಾಜ್ಯಕ್ಕೆ ಈಗ ರೂಪಾಂತರಿ ತಳಿ ಡೆಲ್ಟಾ ಪ್ಲಸ್ ನ ಭೀತಿ ಆವರಿಸಿದೆ. ಮೈಸೂರಿನಲ್ಲಿ ಈಗಾಗಲೇ ಒಂದು ಪ್ರಕರಣ ಪತ್ತೆಯಾಗಿದೆ ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ಹೇಳಿದ್ದಾರೆ.


ಈಗಾಗಲೇ ನೆರೆಯ ರಾಜ್ಯಗಳಾದ ಮಹಾರಾಷ್ಟ್ರ, ಕೇರಳ, ಮಧ್ಯಪ್ರದೇಶದಲ್ಲಿ ಡೆಲ್ಟಾ ಪ್ಲಸ್ ತಳಿಯ ಪ್ರಕರಣಗಳು ಕಂಡುಬಂದಿದೆ. ಸುಮಾರು 40 ಕ್ಕೂ ಹೆಚ್ಚು ಪ್ರಕರಣಗಳು ದೇಶದಲ್ಲಿ ವರದಿಯಾಗಿದೆ.

ಇದು ಅಪಾಯದ ಸೂಚನೆಯಾಗಿದ್ದು, ರಾಜ್ಯಕ್ಕೂ ನೆರೆಯ ರಾಜ್ಯಗಳಿಂದ ಈ ರೂಪಾಂತರಿ ತಳಿ ಕಾಲಿಡುವ ಭೀತಿ ಕಾದಿದೆ. ಈಗಷ್ಟೇ ಅನ್ ಲಾಕ್ ಆಗಿರುವ ಕರ್ನಾಟಕದಲ್ಲಿ ಜನ ಎಲ್ಲೆಂದರಲ್ಲಿ ಓಡಾಡುತ್ತಿದ್ದಾರೆ. ಎಚ್ಚರ ತಪ್ಪಿದರೆ ರಾಜ್ಯದಲ್ಲೂ ಹೊಸ ತಳಿ ಕೊರೋನಾ ಹೆಚ್ಚುವದರಲ್ಲಿ ಸಂಶಯವಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಮಗಳ ಮೇಲೆ ನಿರಂತರವಾಗಿ ಕಾಮತೃಷೆ ತೀರಿಸಿಕೊಂಡ ಅಪ್ಪ ಅರೆಸ್ಟ್