Select Your Language

Notifications

webdunia
webdunia
webdunia
webdunia

ಕನ್ನಡಿಗರ ಆಕ್ಷೇಪಕ್ಕೆ ಮಣಿದ ಲೋಕಸಭೆ

ಕನ್ನಡಿಗರ ಆಕ್ಷೇಪಕ್ಕೆ ಮಣಿದ ಲೋಕಸಭೆ
ನವದೆಹಲಿ , ಮಂಗಳವಾರ, 22 ಜೂನ್ 2021 (09:51 IST)
ನವದೆಹಲಿ: ಸಂಸದರಿಗೆ ಮತ್ತು ಶಾಸಕರಿಗೆ ಬೇರೆ ಬೇರೆ ಭಾಷೆ ಕಲಿಸುವ ವಿಚಾರದಲ್ಲಿ ಕನ್ನಡವನ್ನು ಅವಗಣಿಸಿದ್ದ ಲೋಕಸಭೆ ಇದೀಗ ಕನ್ನಡಿಗರ ಹೋರಾಟದ ಬಳಿಕ ತನ್ನ ನಿಲುವು ಬದಲಿಸಿದೆ.


ಲೋಕಸಭಾ ಸಚಿವಾಲಯ ಸಚಿವರು, ಸಂಸದರಿಗೆ ಭಾರತದ 6 ಮತ್ತು ವಿದೇಶೀ ಭಾಷೆಗಳನ್ನು ಕಲಿಸಲು ವಿಶೇಷ ತರಗತಿ ನಡೆಸಲು ತೀರ್ಮಾನಿಸಿತ್ತು. ಆದರೆ ಭಾರತದ 6 ಭಾಷೆಗಳ ಪೈಕಿ ಕನ್ನಡವಿರಲಿಲ್ಲ. ಇದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಬಗ್ಗೆ ಕನ್ನಡಿಗರು ಸಾಮಾಜಿಕ ಜಾಲತಾಣಗಳ ಮೂಲಕ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.

ಕೊನೆಗೂ ಕನ್ನಡಿಗರ ಹೋರಾಟಕ್ಕೆ ಮಣಿದ ಸಚಿವಾಲಯ ಈಗ ಭಾರತೀಯ ಭಾಷೆಗಳ ಪಟ್ಟಿಯಲ್ಲಿ ಕನ್ನಡದ ಜೊತೆಗೆ ಮಲಯಾಳಂ ಭಾಷೆಯನ್ನೂ ಸೇರಿಸಿದೆ. ಜುಲೈ 5 ರಿಂದ ಆರಂಭವಾಗುವ ಎರಡನೇ ಸೆಷನ್ ನಲ್ಲಿ ಕನ್ನಡವನ್ನು ಕಲಿಸಲಾಗುವುದು.

Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೆಸ್ ನಲ್ಲೂ ಸಿಎಂ ಕುರ್ಚಿಗೆ ಪೈಪೋಟಿ: ಹೈಕಮಾಂಡ್ ನಿಂದ ಎಚ್ಚರಿಕೆ