Publish Date: Sun, 27 Jun 2021 (09:13 IST)
Updated Date: Sun, 27 Jun 2021 (09:14 IST)
ನವದೆಹಲಿ: ಕೊರೋನಾ ಎರಡನೇ ಅಲೆ ಮುಗಿಯುತ್ತಿದ್ದಂತೇ ಮೂರನೇ ಅಲೆ ಬಗ್ಗೆ ನಾನಾ ರೀತಿಯ ಸುದ್ದಿಗಳು ಹರಿದಾಡುತ್ತಿವೆ. ಇದರಲ್ಲಿ ಸಹಜವಾಗಿ ಜನರಲ್ಲಿ ಆತಂಕ ಎದುರಾಗಿದೆ.
ಮೂರನೇ ಅಲೆ ಮಕ್ಕಳನ್ನೇ ಹೆಚ್ಚು ಟಾರ್ಗೆಟ್ ಮಾಡಲಿದೆ. ಇದರಿಂದ ಯುವ ಜನಾಂಗಕ್ಕೆ ಹೆಚ್ಚು ಅಪಾಯ. ಎರಡನೇ ಅಲೆಗಿಂತಲೂ ಮೂರನೇ ಅಲೆ ಹೆಚ್ಚು ಭೀಕರವಾಗಿರುತ್ತದೆ ಎಂಬಿತ್ಯಾದಿ ಸುದ್ದಿಗಳು ಹರಿದಾಡುತ್ತಿದ್ದವು.
ಆದರೆ ಐಸಿಎಂಆರ್ ಪ್ರಕಾರ ಮೂರನೇ ಅಲೆ ಎರಡನೇ ಅಲೆಯಷ್ಟು ತೀವ್ರವಾಗಿರಲ್ಲ. ಈಗಾಗಲೇ ಜನರಲ್ಲಿ ರೋಗ ನಿರೋಧಕ ಶಕ್ತಿ ಬೆಳೆದಿದೆ. ಹೀಗಾಗಿ ಮೂರನೇ ಅಲೆ ಹಿಂದಿನಷ್ಟು ತೀವ್ರವಾಗಿ ಹಬ್ಬದು ಎಂದು ವಿವಿಧ ಅಧ್ಯಯನ ನಡೆಸಿ ಐಸಿಎಂಆರ್ ಈ ಅಭಿಪ್ರಾಯಕ್ಕೆ ಬಂದಿದೆ.