Publish Date: Wed, 30 Jun 2021 (11:25 IST)
Updated Date: Wed, 30 Jun 2021 (09:53 IST)
ಅಹಮ್ಮದಾಬಾದ್: 500 ರೂ. ಕೊಡಲಿಲ್ಲವೆಂಬ ಕಾರಣಕ್ಕೆ ಸ್ನೇಹಿತನಿಗೇ ವ್ಯಕ್ತಿಯೊಬ್ಬ ಚಾಕುವಿನಿಂದ ಇರಿದ ಘಟನೆ ಗುಜರಾತ್ ನಲ್ಲಿ ನಡೆದಿದೆ.
ಆರೋಪಿ ತನ್ನ ಸ್ನೇಹಿತನ ಬಳಿ 500 ರೂ. ಕೇಳಿದ್ದ. ಆದರೆ ತನ್ನ ಬಳಿ ಹಣವಿಲ್ಲ, ಎಲ್ಲಾ ತಾಯಿಯ ಚಿಕಿತ್ಸೆಗೆ ಖರ್ಚಾಗಿದೆ ಎಂದು ಸ್ನೇಹಿತ ಹೇಳಿದ್ದ. ಆದರೆ ಇದನ್ನು ಒಪ್ಪಲು ಆರೋಪಿ ತಯಾರಿರಲಿಲ್ಲ.
ಸ್ನೇಹಿತ ಹಣ ಕೊಡದ ಸಿಟ್ಟಿನಲ್ಲಿ ಚಾಕುವಿನಿಂದ ಆತನ ಮುಖದ ಮೇಲೆ ಇರಿದಿದ್ದಾನೆ. ಮೊದಲು ಎದೆಗೆ ಇರಿಯಲು ಯತ್ನಿಸಿದ್ದಾನೆ. ಆದರೆ ಸಾಧ್ಯವಾಗಿರಲಿಲ್ಲ. ಸಂತ್ರಸ್ತನ ಕಿರುಚಾಟ ಕೇಳಿ ಸ್ಥಳೀಯರು ಧಾವಿಸಿದ್ದು, ಆಸ್ಪತ್ರೆಗೆ ಸಾಗಿಸಿದ್ದಾರೆ. ಇದೀಗ ಆರೋಪಿಯ ಮೇಲೆ ಪ್ರಕರಣ ದಾಖಲಾಗಿದೆ.