Select Your Language

Notifications

webdunia
webdunia
webdunia
webdunia

ಸಿಎಂ ಯಡಿಯೂರಪ್ಪ ಆಡಿಯೋ ಟೇಪ್ ಸಿಬಿಐ ತನಿಖೆಗೆ…

ಸಿಎಂ ಯಡಿಯೂರಪ್ಪ ಆಡಿಯೋ ಟೇಪ್ ಸಿಬಿಐ ತನಿಖೆಗೆ…
ದಾವಣಗೆರೆ , ಭಾನುವಾರ, 3 ನವೆಂಬರ್ 2019 (19:02 IST)
ಸಿಎಂ ಆಡಿಯೋ ಟೇಪ್ ಅನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು. ಆ ಮೂಲಕ ಜನರಿಗೆ ಸತ್ಯ ಗೊತ್ತಾಗಬೇಕಿದೆ. ಹೀಗಂತ ಮಾಜಿ ಸಚಿವ ಹೇಳಿದ್ದಾರೆ.

ಮಾಜಿ ಸಚಿವ ಯು. ಟಿ. ಖಾದರ್ ಹೇಳಿಕೆ ನೀಡಿದ್ದು, ಸಿಎಂ ಬಿ.ಎಸ್. ಯಡಿಯೂರಪ್ಪರ ಆಡಿಯೋ ಬಹಿರಂಗವಾಗಿದೆ. ಇವತ್ತು ಬಹಿರಂಗವಾಗಿ ಮುಖ್ಯಮಂತ್ರಿಗಳೇ ಹೇಳಿದ್ದಾರೆ. ಅಮಿತ್ ಶಾ ಅವರ ಅಣತಿಯಂತೆ ಆಪರೇಷನ್ ಕಮಲ ನಡೆದಿದೆ ಎಂದಿದ್ದಾರೆ.
ಈ ಕೂಡಲೇ ಕೇಂದ್ರ ಗೃಹ ಸಚಿವರು ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ರಾಜೀನಾಮೆ ಕೊಡಬೇಕು. ಆಡಿಯೋ ಟೇಪ್ ಅನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು ಒತ್ತಾಯ ಮಾಡಿದ್ರು. 

ಕಾಂಗ್ರೆಸ್ ಪಕ್ಷ ಆಡಿಯೋ ವಿಷಯದ ವಿರುದ್ಧ ಹೋರಾಟ ಮಾಡಲಿದೆ. ಆಡಳಿತ ವ್ಯವಸ್ಥೆ ಕುಸಿದಿರೋದ್ರಿಂದ ಟಿಪ್ಪುವಿನ ವಿಚಾರ ಬಂದಿದೆ. ಟಿಪ್ಪು ವಿಚಾರ ಕೈಬಿಡುವುದರಿಂದ ಯುವಜನರಿಗೆ ನಷ್ಟವಾಗಲಿದೆ ಎಂದ್ರು.

ಟಿಪ್ಪು ವಿಚಾರವನ್ನ ಪಠ್ಯಪುಸ್ತಕದಿಂದ ತೆಗೆದರೆ ನಮಗೇನೂ ನಷ್ಟವಿಲ್ಲ. ಭಾರತದ ರಾಷ್ಟ್ರಪತಿಗಳೇ ಟಿಪ್ಪುವನ್ನು ಹಾಡಿ ಹೊಗಳಿದ್ದಾರೆ ಅಂತ ಖಾದರ್ ಹೇಳಿದ್ರು.




Share this Story:

Follow Webdunia kannada

ಮುಂದಿನ ಸುದ್ದಿ

ಸಿನಿಮಾ ಸ್ಟೈಲ್ ನಲ್ಲಿ ಖತರ್ನಾಕ್ ಕಳ್ಳನನ್ನು ಬಂಧಿಸಿದ ಪೊಲೀಸರು