Publish Date: Fri, 01 Nov 2019 (16:10 IST)
Updated Date: Fri, 01 Nov 2019 (16:12 IST)
ಶಾಲಾ ಮಕ್ಕಳ ಪಠ್ಯದಿಂದ ಟಿಪ್ಪು ಸುಲ್ತಾನ್ ಇತಿಹಾಸ ತೆಗೆದು ಹಾಕಬಾರದೆಂದು ಜೆಡಿಎಸ್ ಆಗ್ರಹ ಮಾಡಿದೆ.
ಪಠ್ಯದಿಂದ ಹೊರತೆಗೆದ ಮಾತ್ರಕ್ಕೆ ನಿಜವಾದ ಇತಿಹಾಸ ಯಾವತ್ತಿಗೂ ಬದಲಾಗುವುದಿಲ್ಲ. ಬಿ.ಎಸ್. ಯಡಿಯೂರಪ್ಪ, ಜಗದೀಶ್ ಶೆಟ್ಟರ್ ಸೇರಿದಂತೆ ಬಿಜೆಪಿ ಮುಖಂಡರು ಟಿಪ್ಪು ಜಯಂತಿ ಆಚರಣೆ ಮಾಡಿದ್ದಾರೆ. ಅಧಿಕಾರಕ್ಕೆ ಬಂದಾಗ ನಿಲುವು ಬದಲಿಸಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಕೆ.ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.
ಸಂತ್ರಸ್ತರಿಗೆ ತೊಂದರೆಯಾಗಲಿರೋ ಕಾರಣದಿಂದ ನಾವು ಬಿಜೆಪಿ ಸರಕಾರವನ್ನು ಬೀಳಿಸೋದಕ್ಕೆ ಹೋಗೊದಿಲ್ಲ. ಅಲ್ಲದೇ ಬಿಜೆಪಿಗೆ ಸಪೋರ್ಟ್ ಮಾಡೋ ಪ್ರಶ್ನೆಯೇ ಇಲ್ಲ ಅಂತ ಕುಮಾರಸ್ವಾಮಿ ಹೇಳಿದ್ದಾರೆ.