Select Your Language

Notifications

webdunia
webdunia
webdunia
webdunia

ಬಿಜೆಪಿಯವರು ಭಯದಲ್ಲಿದ್ದಾರೆ ಎಂದ ಬಿಎಸ್ಪಿ ಶಾಸಕ!

ಬಿಜೆಪಿಯವರು ಭಯದಲ್ಲಿದ್ದಾರೆ ಎಂದ ಬಿಎಸ್ಪಿ ಶಾಸಕ!
ಚಾಮರಾಜನಗರ , ಬುಧವಾರ, 16 ಜನವರಿ 2019 (13:58 IST)
ಬಿಜೆಪಿಯ 104 ಜನ ಶಾಸಕರನ್ನ  ದೆಹಲಿಗೆ ಕರೆದುಕೊಂಡು ಹೋಗಿ ಇಟ್ಟುಕೊಂಡಿದ್ದು ಏಕೆ? ಬಿಜೆಪಿಯವರಿಗೆ ಭಯ ಇದೆ. ಹೀಗಂತ ಬಿಎಸ್ಪಿ ಶಾಸಕ ಹೇಳಿದ್ದಾರೆ.

ಕೊಳ್ಳೇಗಾಲ ಶಾಸಕ ಎನ್.ಮಹೇಶ್ ಹೇಳಿಕೆ ನೀಡಿದ್ದು, ಸಮ್ಮಿಶ್ರ ಸರ್ಕಾರ ಸುಭದ್ರವಾಗಿದೆ. ಇಬ್ಬರು ಪಕ್ಷೇತರ ಶಾಸಕರು ವಿತ್ ಡ್ರಾ ಮಾಡಿದ್ದಾರೆ. ಇದರಿಂದ 118 ರಿಂದ 117 ಜನ ಆಗ್ತೀವಿ ಅಷ್ಟೇ. ನಾನು ಕುಮಾರಸ್ವಾಮಿ ಸರ್ಕಾರದ ಪರವಾಗಿದ್ದೇನೆ ಎಂದರು.

ಐದು ಜನ ಶಾಸಕರು ಮುಂಬೈ ಹೊಟೇಲ್ ನಲ್ಲಿ ಬಿಜೆಪಿ ಸಂಪರ್ಕದಲ್ಲಿ ಇರುವುದೆಲ್ಲ ಬರೀ ರೂಮರ್ ಅಷ್ಟೇ ಎಂದರು.
ಲೋಕಸಭಾ ಚುನಾವಣೆಗೆ ಪಕ್ಷ ಏನಾದ್ರೂ ಅಲೆಯನ್ಸ್ ಆದ್ರೆ ಸ್ಪರ್ಧೆ ಇಲ್ಲ, ಅಲೆಯನ್ಸ್ ಆಗಲಿಲ್ಲ ಅಂದ್ರೆ ಎಲ್ಲಾ ಕ್ಷೇತ್ರದಲ್ಲೂ ಸ್ಪರ್ಧೆ ಖಚಿತ ಎಂದರು.

ಮೈಸೂರು ಭಾಗದಲ್ಲಿ ಹೆಚ್ಚು ಬಿಎಸ್ಪಿಗೆ ಒಲವಿದೆ.  ಬಾಂಬೆ ಕರ್ನಾಟಕ, ಹೈದ್ರಾಬಾದ್ ಕರ್ನಾಟಕದಲ್ಲೂ ಇದೆ.  
ಎಲ್ಲವೂ ಬೆಹನ್ ಜೀ ತೀರ್ಮಾನ ಮಾಡುತ್ತಾರೆ ಎಂದು ಶಾಸಕ ಎನ್. ಮಹೇಶ್ ತಿಳಿಸಿದರು.Share this Story:

Follow Webdunia kannada

ಮುಂದಿನ ಸುದ್ದಿ

ಆಪರೇಷನ್ ಕಮಲ: ಬಾಯ್ಬಿಡದ ಸಚಿವ ಹೆಚ್.ಡಿ.ರೇವಣ್ಣ