Publish Date: Tue, 15 Jan 2019 (17:35 IST)
Updated Date: Tue, 15 Jan 2019 (17:37 IST)
ಹೊಟ್ಟೆಯೊಳಗೆ ವಿಷ ಇಟ್ಕೊಂಡು ಅಧಿಕಾರ ಮಾಡಿದರೆ ಹೀಗೆ ಆಗುತ್ತದೆ. ಸರಕಾರ ಉರುಳಿಸುವ ಕೆಲಸ ನಮ್ಮದ್ದಲ್ಲ. ಆದರೆ ನಾವು ಸರಕಾರ ಬೀಳಲಿ ಎಂದೇ ಅಂದುಕೊಂಡಿದ್ದೇವೆ. ಹೀಗಂತ ಬಿಜೆಪಿ ಶಾಸಕ ಹೇಳಿದ್ದಾರೆ.
ರಾಜ್ಯದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಜನರು ಬಯಸಿದ್ದಲ್ಲ ಎಂದು ಚಿಕ್ಕಮಗಳೂರಿನಲ್ಲಿ ಶಾಸಕ ಸಿ.ಟಿ.ರವಿ ಹೇಳಿಕೆ ನೀಡಿದ್ದಾರೆ.
ಇಂತಹ ನೀಚ ಮುಖ್ಯಮಂತ್ರಿಯನ್ನು ನಾನೆಂದೂ ನೋಡಿರಲಿಲ್ಲ ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಈ ಹಿಂದೆ ಮಾಜಿ ಸಿಎಂ ಸಿದ್ದರಾಮಯ್ಯ ಕುರಿತು ಹೇಳಿದ್ದರು ಎಂದರು. ನಾನು ಎಂದಿಗೂ ಸಿದ್ದರಾಮಯ್ಯ ಬಗ್ಗೆ ನೀಚ ಪದ ಬಳಕೆ ಮಾಡಿಲ್ಲ. ಹೊಟ್ಟೆಯೊಳಗೆ ವಿಷ ಇಟ್ಕೊಂಡು ಅಧಿಕಾರ ಮಾಡಿದ್ರೆ ಹೀಗೆ ಅಗುತ್ತದೆ. ಸರಕಾರ ಉರುಳಿಸುವ ಕೆಲಸ ನಮ್ಮದ್ದಲ್ಲ. ಆದರೆ ನಾವು ಸರ್ಕಾರ ಬೀಳಲಿ ಎಂದೇ ಅಂದುಕೊಂಡಿದ್ದೇವೆ ಎಂದು ಟಾಂಗ್ ನೀಡಿದರು.
ಅವರ ಶಾಸಕರು ಹೊರಗೆ ಹೋದರೆ ನಮ್ಮನ್ನು ಯಾಕೆ ದೂರುವುದು? ಎಂದು ಪ್ರಶ್ನಿಸಿದ ಅವರು, ಬಿಜೆಪಿಯವರು ಗುರುಗಾಮಕ್ಕೆ ಹೋದರೆ ಇವರಿಗೆ ಯಾಕೆ ಭಯ ಎಂದು ಕೇಳಿದರು.
ಅವರಲ್ಲಿ ಇರುವ ಬಂಡಾಯ ಹೆಚ್ಚಾದರೆ ಅದನ್ನ ಶಮನ ಪಡಿಸುವುದು ನಮ್ಮ ಕೆಲಸವಲ್ಲ. ನಾವೇನೂ ಕಾಂಗ್ರೆಸ್ ಹೈಕಮಾಂಡ್ ಅಲ್ಲ. ಸರ್ಕಾರ ಬೀಳಬೇಕು ಎಂಬುದು ಜನರ ಬಯಕೆಯಾಗಿದೆ. ನಮ್ಮದು ಕೂಡ ಸರ್ಕಾರ ಬೀಳಲಿ ಎಂಬ ಬಯಕೆಯಿದೆ ಎಂದು ಹೇಳಿದರು.