Publish Date: Wed, 16 Jan 2019 (13:53 IST)
Updated Date: Wed, 16 Jan 2019 (13:58 IST)
ಆಪರೇಷನ್ ಕಮಲದ ಬಗ್ಗೆ ಮಾತನಾಡಲು ಸಚಿವ ಹೆಚ್.ಡಿ. ರೇವಣ್ಣ ನಿರಾಕರಿಸಿದ್ದಾರೆ. ಹೊಸ ಪಂಚಾಗ ನೋಡಿ ಹೇಳುತ್ತೇನೆ ಎಂದು ವ್ಯಂಗ್ಯವಾಡಿದ್ದಾರೆ.
ಬಹಳ ಕೂಲಾಗಿರುವಂತೆ ಕಂಡುಬಂದ ಸೂಪರ್ ಸಿಎಂ ಹೆಚ್.ಡಿ.ರೇವಣ್ಣ, ರಾಜ್ಯ ರಾಜಕೀಯ ಬೆಳವಣಿಗೆ ಬಗ್ಗೆ ಏನೂ ಗೊತ್ತಿಲ್ಲ ಎಂಬ ನಾಟಕೀಯ ಮುಗಳ್ ನಗು ಹೊರಹೊಕಿದ್ದಾರೆ.
ನಾವು ಆರಾಮಾಗಿದ್ದೇವೆ ಎಂದು ಹೇಳಿಕೆ ನೀಡಿರುವ ಅವರು, ಅಪರೇಷನ್ ಕಮಲದ ಬಗ್ಗೆ ಶಾಸಕ ಕೆ.ಎಂ ಶಿವಲಿಂಗೇಗೌಡ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ್ದು, ರಾಜೀನಾಮೆ ನೀಡಿರುವ ಶಾಸಕರು ಗುಂಟರ್ ಗೂಳಿಯಂತೆ.
ಅವು ಆಹಾರ ಇದ್ದ ಕಡೆ ಮೇಯಲು ಹೋಗುತ್ತವೆ. ಅವರು ನಾವು ಗೆಲ್ಲಿಸಿರುವ ಶಾಸಕರಲ್ಲ. ನಾವೇಕೆ ಅವರ ಬಗ್ಗೆ ತಲೆಕೆಡಿಸಿಕೊಳ್ಳಬೇಕು ಎಂದು ಲೇವಡಿ ಮಾಡಿದ್ದಾರೆ.