Publish Date: Tue, 15 Jan 2019 (17:38 IST)
Updated Date: Tue, 15 Jan 2019 (17:40 IST)
ರಾಜ್ಯ ರಾಜ್ಯಕಾರಣದಲ್ಲಿ ಎಲ್ಲವೂ ಸರಿಯಾಗಿಯೇ ಇದೆ. ನಮ್ಮ ಶಾಸಕರು ಎಲ್ಲಿ ಹೋಗಲ್ಲ ಎಂದು ಕೈ ಪಾಳೆಯದ ಮುಖಂಡರು ಹೇಳಿಕೊಂಡಿದ್ದಾರೆ.
ಕಾಂಗ್ರೆಸ್ ನ ಎಲ್ಲಾ ಶಾಸಕರೂ ನಮ್ಮ ಜೊತೆಯಲ್ಲಿಯೇ ಇದ್ದಾರೆ. ಬಿಜೆಪಿಯವರು ಭಯ ಹುಟ್ಟಿಸುವ ಕೆಲಸ ಮಾಡುತ್ತಿದ್ದು, ಮಾಧ್ಯಮದವರು ಬೆಂಬಲ ನೀಡಬೇಡಿ. ಹೀಗಂತ ಚಿಕ್ಕಮಗಳೂರಿನಲ್ಲಿ ಕೆ.ಜೆ.ಜಾರ್ಜ್ ಹೇಳಿಕೆ ನೀಡಿದ್ದಾರೆ.
ಪಕ್ಷದ ರಾಜ್ಯ ಉಸ್ತುವಾರಿ ವೇಣುಗೋಪಾಲ ರಾಜ್ಯಕ್ಕೆ ಆಗಮನದಲ್ಲಿ ಯಾವುದೇ ವಿಶೇಷ ಇಲ್ಲ ಎಂದ ಅವರು, ರಾಜ್ಯದಲ್ಲಿ ಪಕ್ಷ ಸಂಘಟನೆಗೆ ಅವರು ಬಂದಿದ್ದಾರೆ. ಇವತ್ತು ಬರ್ತಾರೆ, ನಾಳೆಯೂ ಬರ್ತಾರೆ ಎಂದು ಹೇಳಿದರು.