Publish Date: Tue, 15 Jan 2019 (09:28 IST)
Updated Date: Tue, 15 Jan 2019 (09:38 IST)
ಬೆಂಗಳೂರು : ಜೆಡಿಎಸ್ ನವರೇ ನಮ್ಮ ಶಾಸಕರನ್ನು ಸೆಳೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿಕೆಗೆ ಸಿಎಂ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
ಈ ಕುರಿತು ಮಾತನಾಡಿದ ಅವರು,’ ಯಡಿಯೂರಪ್ಪ ಸುಳ್ಳು ಹೇಳುವುದನ್ನು ಮೊದಲು ಬಿಡಲಿ. ಮುಂಬೈನಲ್ಲಿ ಯಾರ್ಯಾರ ಹೆಸರಲ್ಲಿ ರೂಮ್ ಬುಕ್ ಆಗಿದೆ ಎಂದು ನನಗೆ ಗೊತ್ತಿದೆ. ಬಿಜೆಪಿ ನಾಯಕರ ಹೆಸರಿನಲ್ಲಿ ರೂಮ್ ಬುಕ್ ಆಗಿರುವುದಕ್ಕೆ ನನ್ನ ಬಳಿ ಎಲ್ಲಾ ಮಾಹಿತಿ ಇದೆ’ ಎಂದು ಹೇಳಿದ್ದಾರೆ.
‘ನಾನು ಬಿಜೆಪಿಯ ಯಾವುದೇ ಶಾಸಕರನ್ನು ಸಂಪರ್ಕಿಸಿಲ್ಲ. ಸಂಪರ್ಕ ಮಾಡಿದ್ದರೆ ಆ ಕುರಿತು ವಿಷಯ ಬಹಿರಂಗಡಿಸಲಿ. ಅದನ್ನು ಬಿಟ್ಟು ಯಡಿಯೂರಪ್ಪ ಸುಳ್ಳು ಹೇಳೋದು ಬೇಡ. ನನಗೆ 120 ಶಾಸಕರ ಬೆಂಬಲ ಇದೆ. ಯಾವ ಕಾಂಗ್ರೆಸ್ ಶಾಸಕರು ಕೂಡ ನಾಟ್ ರೀಚೇಬಲ್ ಆಗಿಲ್ಲ’ ಎಂದು ಟಾಂಗ್ ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.