Select Your Language

Notifications

webdunia
webdunia
webdunia
webdunia

ಟೀಂ ಇಂಡಿಯಾಕ್ಕೆ ಶಬ್ನಮ್ ಗಿಲ್ ಆಯ್ಕೆಗೂ ಮೊದಲು ನಡೆದಿತ್ತು ರಾಹುಲ್ ದ್ರಾವಿಡ್ ಜತೆ ಮೀಟಿಂಗ್!

ರಾಹುಲ್ ದ್ರಾವಿಡ್
ಮುಂಬೈ: ಆಸ್ಟ್ರೇಲಿಯಾ ವಿರುದ್ಧ ಏಕದಿನ ಪಂದ್ಯಗಳಿಗೆ ಯುವ ಆಟಗಾರ ಶಬ್ನಮ್ ಗಿಲ್ ಅವರನ್ನು ಆಯ್ಕೆ ಮಾಡುವ ಮೊದಲು ಎ ತಂಡದ ಕೋಚ್ ರಾಹುಲ್ ದ್ರಾವಿಡ್ ಜತೆಗೆ ಆಯ್ಕೆ ಸಮಿತಿ ಸಭೆ ನಡೆಸಿತ್ತು ಎಂಬ ಅಂಶ ಬಹಿರಂಗವಾಗಿದೆ.


ಇದನ್ನು ಸ್ವತಃ ಆಯ್ಕೆ ಸಮಿತಿ ಮುಖ್ಯಸ್ಥ ಎಂಎಸ್ ಕೆ ಪ್ರಸಾದ್ ಬಹಿರಂಗಪಡಿಸಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ ಆಡುವಷ್ಟು ಶಬ್ನಮ್ ತಯಾರಾಗಿದ್ದಾರೆಯೇ ಎಂಬ ಬಗ್ಗೆ ದ್ರಾವಿಡ್ ಅಭಿಪ್ರಾಯ ಆಲಿಸಿ ಆಯ್ಕೆ ಮಾಡಲಾಯಿತು ಎಂದು ಪ್ರಸಾದ್ ಹೇಳಿದ್ದಾರೆ.

ಸದ್ಯಕ್ಕೆ ಟೀಂ ಇಂಡಿಯಾದಲ್ಲಿ ಇರುವ ಆಟಗಾರರ ಪೈಕಿ ಅರ್ಧಕ್ಕರ್ಧ ಆಟಗಾರರೂ ರಾಹುಲ್ ದ್ರಾವಿಡ್ ಗರಡಿಯಲ್ಲೇ ಪಳಗಿದವರು. ಶಬ್ನಮ್ ಜತೆಗೆ ಆಯ್ಕೆಯಾದ ವಿಜಯ್ ಶಂಕರ್ ಕೂಡಾ ದ್ರಾವಿಡ್ ಶಿಷ್ಯನೇ. ವಿಶೇಷವೆಂದರೆ ಎಲ್ಲರೂ ದ್ರಾವಿಡ್ ರಿಂದ ಕಲಿತಿದ್ದನ್ನು ಸದಾ ಸ್ಮರಿಸಿಕೊಳ್ಳುತ್ತಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ರಣಜಿ ಕ್ವಾರ್ಟರ್ ಫೈನಲ್ ಪಂದ್ಯಕ್ಕೆ ಕರ್ನಾಟಕ ರೆಡಿ: ಆದರೆ ಒಂದು ಬ್ಯಾಡ್ ನ್ಯೂಸ್!