ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿಗೆ ಟೀಂ ಇಂಡಿಯಾಕ್ಕೆ ಆಯ್ಕೆಯಾಗಿರುವ ಯುವ ಬ್ಯಾಟ್ಸ್ ಮನ್ ವಿಜಯ್ ಶಂಕರ್ ತಮ್ಮ ಮೇಲೆ ಗುರು ರಾಹುಲ್ ದ್ರಾವಿಡ್ ಪ್ರಭಾವವಿದೆ ಎಂದಿದ್ದಾರೆ.
ವಿಜಯ್ ಶಂಕರ್ ಭಾರತ ಎ ತಂಡದ ಪರ ಮಿಂಚಿದವರು. ಹೀಗಾಗಿ ಕೋಚ್ ರಾಹುಲ್ ದ್ರಾವಿಡ್ ಗರಡಿಯಲ್ಲಿ ಪಳಗಿದವರು. ಹೀಗಾಗಿ ಟೀಂ ಇಂಡಿಯಾಕ್ಕೆ ಆಯ್ಕೆಯಾದ ಬೆನ್ನಲ್ಲೇ ಗುರು ಸ್ಮರಣೆ ಮಾಡಿದ್ದಾರೆ.
‘ನಾನು ಮಾನಸಿಕವಾಗಿ ಗಟ್ಟಿಯಾಗಿದ್ದೇನೆ. ನನಗೆ ರಾಹುಲ್ ಸರ್ ನಾನು ಕೆಳ ಕ್ರಮಾಂಕದಲ್ಲಿ ಗೇಮ್ ಫಿನಿಶರ್ ಆಗಬಲ್ಲೆ ಎಂದು ಮನವರಿಕೆ ಮಾಡಿದ್ದಾರೆ. ರಾಹುಲ್ ಸರ್ ನನ್ನಲ್ಲಿ ಬಹಳ ವಿಶ್ವಾಸವಿಟ್ಟು ಎ ತಂಡದಲ್ಲಿ 5 ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಕಳುಹಿಸುತ್ತಿದ್ದರು’ ಎಂದು ವಿಜಯ್ ಶಂಕರ್ ಹೇಳಿಕೊಂಡಿದ್ದಾರೆ. ಗುರು ದ್ರಾವಿಡ್ ವಿಶ್ವಾಸವನ್ನು ಟೀಂ ಇಂಡಿಯಾದಲ್ಲೂ ವಿಜಯ್ ಶಂಕರ್ ಉಳಿಸಿಕೊಳ್ಳುತ್ತಾರಾ ಕಾದು ನೋಡಬೇಕಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ