ಬೇಲೂರು: ತಾಲ್ಲೂಕಿನ ಜಗಬೋರನಹಳ್ಳಿಯಲ್ಲಿ ಭಾನುವಾರ ಮದಗಜಗಳ ಕಾದಾಟದಲ್ಲಿ ಭೀಮ ಆನೆ ಒಂದು ದಂತ ಕಳೆದುಕೊಂಡು ನೋವಿನಲ್ಲಿ ಭೀಮ ನರಳಾಡಿದ್ದಾನೆ.
ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬೆನ್ನಲ್ಲೇ ಮೈಸೂರು ದಸರಾ ಭೀಮ ಆನೆ ಅಭಿಮಾನಿಗಳು ಆತಂಕ ಗೊಂಡಿದ್ದರು. ಆದರೆ ಇದು ಆ ಆನೆಯಲ್ಲ.
ಹಾಸನ ಸಮೀಪದ ಅರಣ್ಯ ಪ್ರದೇಶದಲ್ಲಿ ನಡೆದ ಕಾಡಾನೆಗಳ ಕಾಳಗದಲ್ಲಿ ಕಾಡಾನೆ ಭೀಮನ ದಂತ ಮುರಿದಿದೆ. ಕಳೆದೊಂದು ವಾರದಿಂದ ಬೇಲೂರು ತಾಲ್ಲೂಕಿನ ಬಿಕ್ಕೋಡು ಹೋಬಳಿಯ ಹಲವು ಗ್ರಾಮಗಳ ಮುಖ್ಯಬೀದಿಯಲ್ಲಿ ಓಡಾಡುತ್ತಿದ್ದ ಕಾಡಾನೆ ಭೀಮ ಇತ್ತೀಚೆಗೆ ಮತ್ತೊಂದು ಕಾಡಾನೆ ಕ್ಯಾಪ್ಟನ್ ಜೊತೆ ಕಾಣಿಸಿಕೊಂಡಿತ್ತು.
ಬೇಲೂರು ತಾಲ್ಲೂಕಿನ ಜಗಬೋರನಹಳ್ಳೀ ಗ್ರಾಮದಲ್ಲಿ ಕಾಡಾನೆ ಭೀಮ ಮತ್ತು ಕ್ಯಾಪ್ಟನ್ ಆನೆಗಳು ಭೀಕರ ಕಾದಾಟ ನಡೆಸಿತ್ತು. ಇದರಲ್ಲಿ ಭೀಮ ತನ್ನ ಒಂದು ದಂತವನ್ನು ಕಳೆದುಕೊಂಡಿತ್ತು. ಸಾಮಾಜಿಕ ಜಾಲತಾಣದಲ್ಲಿ ಈ ಸುದ್ದಿ ವೈರಲ್ ಬೆನ್ನಲ್ಲೇ ಮೈಸೂರು ಭೀಮ ಅಭಿಮಾನಿಗಳಲ್ಲಿ ಆತಂಕ ವ್ಯಕ್ತವಾಯಿತು. ಇದು ಅದೇ ಆನೆಯಾ ಎಂಬ ಅನುಮಾನ ವ್ಯಕ್ತವಾಗಿತ್ತು.
ಆದರೆ ಅದು ಆನೆ ಬೇರೆ, ಇದು ಆನೆ ಬೇರೆ ಮಾಹಿತಿ ಸಿಕ್ಕಿದೆ.