ಭೀಮಾತೀರದ ಹಂತಕ ಗಂಗಾಧರ ನಿಗೂಢ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವ ಪ್ರಮುಖ ಆರೋಪಿ ಬಾಷಾಸಾಬ್ ನದಾಪ್ ಬಂಧನವಾಗಿದೆ. ಇಂಡಿ ಪಟ್ಟಣದಲ್ಲಿ ಖಚಿತ ಮಾಹಿತಿ ಮೇರೆಗೆ ಸಿಐಡಿ ತಂಡ ಆರೋಪಿಯನ್ನು ಬಂಧಿಸಿದೆ.
ಗಂಗಾಧರ ಹತ್ಯೆಯ ಕುರಿತು ನಿಖರ ಮಾಹಿತಿಯನ್ನು ಬಾಷಾಸಾಬ್ ನದಾಪ್ ಹೊಂದಿದ್ದಾನೆ ಎನ್ನಲಾಗಿದೆ. ಧರ್ಮರಾಜ್ ಎನ್ಕೌಂಟರ್ ದಿನ ಪಿಎಸ್ಐ ಗೋಪಾಲ್ ಹಳ್ಳೂರ್ ನನ್ನ ಧರ್ಮನ ಅಡ್ಡೆಗೆ ಕರೆದುಕೊಂಡು ಹೋಗಿದ್ದನಂತೆ ಬಾಷಾಸಾಬ್ ನದಾಪ್. ಧರ್ಮರಾಜ್ ಗೆ ವೆಪನ್ಸ್ ಪೂರೈಕೆ ಮಾಡಿದ್ದಾಗಿ ಹೇಳಿಕೊಂಡು ಪಿಎಸ್ಐ ನನ್ನ ಧರ್ಮರಾಜ್ ಚಡಚಣನ ಅಡ್ಡೆ ಕೊಂಕಣಗಾಂವ್ ಗ್ರಾಮದ ಹೊರ ವಲಯಕ್ಕೆ ಕರೆಯ್ದೊಯ್ದಿದ್ದ ಆಸಾಮಿ ಈತನೇ ಎಂದು ಹೇಳಲಾಗುತ್ತಿದೆ.
ಗಂಗಾಧರ ಹತ್ಯೆಯ ಪ್ಲಾನ್ ಹಿಂದೆ ಬಾಷಾಸಾಬ್ ನದಾಪ್ ಇದ್ದಾನೆಂಬ ಸಂಶಯ ಬಲವಾಗಿದೆ. ಹೀಗಾಗಿ ಸಿಐಡಿ ತಂಡವು ಭಾಷಾಸಾಬ್ ಬಂಧನಕ್ಕೆ ಬಲೆ ಬೀಸಿತ್ತು. ಬಂಧಿತನಿಂದ ಗಂಗಾಧರ ಹತ್ಯೆ ಹಾಗೂ ಧರ್ಮರಾಜ್ ಎನ್ಕೌಂಟರ್ ಪ್ರಕರಣದ ಕುರಿತು ಮತ್ತಷ್ಟು ಸ್ಪೋಟಕ ಮಾಹಿತಿ ಹೊರಬೀಳುವ ಸಾಧ್ಯತೆ ಇದೆ. ಈವರೆಗೆ ಗೋವಾದಲ್ಲಿ ಅಡಗಿದ್ದ ಬಾಷಾ ಸಾಬ್ ನದಾಪ್ ಈಗ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.