Publish Date: Thu, 26 Jul 2018 (16:30 IST)
Updated Date: Thu, 26 Jul 2018 (16:34 IST)
ಅವರು ಯುವ ಸ್ವಾಮೀಜಿ. ಆದರೆ ಬಾವಿಗೆ ಹಾರಿದ್ದಾರೆ. ಸಾವನ್ನಪ್ಪಿರುವ ಅವರ ಶವವನ್ನು ಮೇಲೆತ್ತಲಾಗಿದೆ. ಕಾರಣ…
ಮಾನಸಿಕವಾಗಿ ನೊಂದು ಯುವ ಸ್ವಾಮೀಜಿ ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
30 ವರ್ಷದ ಶಿವಮೂರ್ತಿ ಶಿವಮಠ ಆತ್ಮಹತ್ಯೆಗೆ ಶರಣಾದ ಸ್ವಾಮೀಜಿ. ಹುಬ್ಬಳ್ಳಿಯ ಮಂಟೂರು ರಸ್ತೆಯ ಕಲಬುರ್ಗಿಮಠದ ಬಾವಿಯಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಲಬುರಗಿ ಮಠದಲ್ಲಿ ಪೂಜಾರಿಯಾಗಿದ್ದ ಶಿವಮೂರ್ತಿ, ಕಳೆದ ಮೂರು ದಿನಗಳಿಂದ ಕಾಣೆಯಾಗಿದ್ದರು.
ಬಾವಿಯಲ್ಲಿ ಶವವಾಗಿ ಶಿವಮೂರ್ತಿ ಸ್ವಾಮೀಜಿ ಪತ್ತೆಯಾಗಿದ್ದಾರೆ. ಈ ಕುರಿತು ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.