Select Your Language

Notifications

webdunia
webdunia
webdunia
webdunia

ಸೋದೆ ಮಠದ ಸುಪರ್ದಿಗೆ ಶೀರೂರು ಮಠ

ಸೋದೆ ಮಠದ ಸುಪರ್ದಿಗೆ ಶೀರೂರು ಮಠ
ಉಡುಪಿ , ಗುರುವಾರ, 26 ಜುಲೈ 2018 (16:13 IST)
ಶೀರೂರು ಶ್ರೀಗಳ ನಿಗೂಢ ಸಾವಿನ ಪ್ರಕರಣ ನಂತರ ಶೀರೂರು ಮೂಲ ಮಠದ ಆಡಳಿತ  ಉಸ್ತುವಾರಿಗೆ  ಸೋದೆ ಮಠದ ವಿಶ್ವ ವಲ್ಲಭ ತೀರ್ಥರು ಮಠದ ಮಾಜಿ ಮ್ಯಾನೇಜರ್ ಸುಬ್ರಹ್ಮಣ್ಯ ಭಟ್ ಅವರನ್ನು ನೇಮಿಸಿದ್ದಾರೆ.

ಸದ್ಯ ಶಿರೂರು ಮಠದ ಒಳಗೆ  ಇತರರ  ಪ್ರವೇಶಕ್ಕೆ ನಿರ್ಬಂಧವನ್ನು ಹೇರಿರುವ ಪೋಲಿಸ್ ಇಲಾಖೆ ಮ್ಯಾನೇಜರ್ ಸುಬ್ರಹ್ಮಣ್ಯ ಭಟ್ ಹಾಗೂ ಇಬ್ಬರು ಅರ್ಚಕರಿಗೆ ಹಾಗೂ ಒಬ್ಬ ಕ್ಲೀನರ್ ಗೆ ಮಾತ್ರ ಮಠದ ಪ್ರವೇಶಕ್ಕೆ ಅನುಮತಿ ನೀಡಿದೆ.

ಮೂಲ ಮಠದಲ್ಲಿ ಸುಬ್ರಹ್ಮಣ್ಯ ಭಟ್ ಅವರ ಉಸ್ತುವಾರಿಯಲ್ಲಿ ವಿಠಲ ಹಾಗೂ ಇತರ ದೇವರುಗಳ ಪೂಜೆ ನಡೆಯುತ್ತಿದೆ
ಇನ್ನೂ ಶಿರೂರು ಮಠ 2500 ಏಕ್ರೆಗೂ  ಹೆಚ್ಚು  ಭೂಮಿ ಇದೆ. ಮಠದ ಅಸ್ತಿ ಅತೀಕ್ರಮಣ ಆಗುತ್ತೇ ಎಂಬ ಕಾರಣಕ್ಕಾಗಿ ಶಿರೂರು ಶ್ರೀಗಳ ಸಾವಿನ ಬಳಿಕ ಸಂಪ್ರದಾಯದಂತೆ ಶಿರೂರು ಮೂಲ ಮಠವನ್ನು ಸೋದೆ ಮಠ ತನ್ನ ಸುರ್ಪದಿಗೆ ತೆಗೆದುಕೊಂಡಿದೆ.
ಈಗ ಮಠದ ಆಸ್ತಿ ಪಾಸ್ತಿಗಳ ಮೇಲ್ವಿಚಾರಣೆಯನ್ನು ಸೋದೆ ಮಠ ನೋಡುತ್ತಿದ್ದು, ಇದರ ಉಸ್ತುವಾರಿಯ ಕೆಲಸವನ್ನು ಸುಬ್ರಹ್ಮಣ್ಯ ಭಟ್ ಅವರಿಗೆ ವಹಿಸಲಾಗಿದೆ. ಮಠದ ಒಳಗೆ ಪ್ರವೇಶಿಸುವಾಗ ಸುಬ್ರಹ್ಮಣ್ಯ ಭಟ್ , ಅರ್ಚಕರು ಮತ್ತು ಒಬ್ಬ ಕ್ಲೀನರ್ ಪೋಲಿಸ್ ಇಲಾಖೆಯ ದಾಖಲೆಗಳಿಗೆ ಸಹಿ ಹಾಕಿಯೇ ಒಳ ಪ್ರವೇಶಿಸಬೇಕಾಗುತ್ತದೆ. ಇನ್ನೂ ಶಿರೂರು ಮೂಲ ಮಠದಲ್ಲಿ ವೈದ್ಯರ ತಂಡವೊಂದು ಬೀಡು ಬಿಟ್ಟಿರುವ ವಿಚಾರ ತಿಳಿದು ಬಂದಿದೆ. ತಂಡದಲ್ಲಿ ಸುಮಾರು 10 ಕ್ಕೂ ಹೆಚ್ಚು ವೈದ್ಯರು ಮಠದ ಸುತ್ತಾ ಪರಿಶೀಲನೆ ನಡೆಸುತ್ತಿದ್ದಾರೆ ಎನ್ನಲಾಗಿದೆ. 


Share this Story:

Follow Webdunia kannada

ಮುಂದಿನ ಸುದ್ದಿ

ವಿಚಾರವಾದಿಗಳ ಹತ್ಯೆಯಲ್ಲಿ ಹಿಂದುಗಳ ಕೈವಾಡವಿದೆ ಎಂದು ಆರೋಪಿಸಿದವರು ಯಾರು?