Select Your Language

Notifications

webdunia
webdunia
webdunia
webdunia

ಶಿರೂರು ಮಠದಲ್ಲಿ ಪೂಜೆಗೂ ಪೊಲೀಸರ ನಿರ್ಬಂಧ

ಶಿರೂರು ಲಕ್ಷ್ಮೀವರ ಶ್ರೀ
ಉಡುಪಿ , ಶುಕ್ರವಾರ, 20 ಜುಲೈ 2018 (10:35 IST)
ಉಡುಪಿ: ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಶಿರೂರು ಮಠದ ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿ  ಪ್ರಕರಣದ ತನಿಖೆ ನಡೆಸಲು ಮೂಲ ಮಠದಲ್ಲಿ ಪೊಲೀಸ್ ಸರ್ಪಗಾವಲು ಹಾಕಲಾಗಿದೆ.

ಶಿರೂರು ಮೂಲ ಮಠದಲ್ಲಿ ಬೀಡುಬಿಟ್ಟಿರುವ ಪೊಲೀಸರು ತಾತ್ಕಾಲಿಕವಾಗಿ ಮಠವನ್ನು ತಮ್ಮ ಸುಪರ್ದಿಗೆ ಪಡೆದಿದ್ದಾರೆ. ಮಠದಲ್ಲಿ ಶ್ರೀಗಳ ಖಾಸಗಿ ಕೋಣೆ, ಹಣಕಾಸು ವ್ಯವಹಾರಗಳ ಬಗ್ಗೆ ಮತ್ತು ಸಿಬ್ಬಂದಿಗಳ ವಿಚಾರಣೆ ನಡೆಸಿದ ಪೊಲೀಸರು ಸಂಪೂರ್ಣವಾಗಿ ಮಠವನ್ನು ತಮ್ಮ ವಶಕ್ಕೆ ಪಡೆದಿದ್ದಾರೆ.

ಹೀಗಾಗಿ ಮಠಕ್ಕೆ ಭಕ್ತರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಅಲ್ಲದೆ, ಇಂದು ಒಂದು ಗಂಟೆ ಕಾಲ ಮಾತ್ರ ನಿತ್ಯ ಪೂಜೆಗೆ ಅವಕಾಶ ನೀಡಿದ್ದಾರೆ. ಮೂಲ ಮಠದಲ್ಲಿಯೇ ಶ್ರೀಗಳ ಅಂತಿಮ ವಿಧಿ ವಿಧಾನ ನರವೇರಿಸಲಾಗಿತ್ತು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

Share this Story:

Follow Webdunia kannada

ಮುಂದಿನ ಸುದ್ದಿ

ಮಾಜಿ ಸಿಎಂ ಸಿದ್ದರಾಮಯ್ಯಗೆ ಶಾಕ್ ನೀಡಲು ಕಾಂಗ್ರೆಸ್ ನಲ್ಲೇ ಸಿದ್ಧತೆ!