Publish Date: Fri, 10 May 2019 (16:36 IST)
Updated Date: Fri, 10 May 2019 (16:39 IST)
ಬೆಳಗಾವಿ ಕೆಎಂಎಫ್ ಜಾರಕಿಹೊಳಿ ತೆಕ್ಕೆಗೆ ಸರಿದಿದೆ.
ಬೆಳಗಾವಿ ಕೆಎಂಎಫ್ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಜಾರಕಿಹೊಳಿ ಕುಟುಂಬದ ಕೈ ಮೇಲಾಗಿದೆ.
ಅಧ್ಯಕ್ಷ ಸ್ಥಾನಕ್ಕೆ ವಿವೇಕರಾವ್ ಪಾಟೀಲ್ ನಾಮಪತ್ರ ಸಲ್ಲಿಕೆ ಮಾಡಿದ್ದರು. ವಿವೇಕರಾವ್ ಪಾಟೀಲ್ ಒಮ್ಮತದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದರು. ಇವರ ಆಯ್ಕೆ ಬಹುತೇಕ ಖಚಿತವಾಗಿದೆ.
ಅಧಿಕೃತ ಘೋಷಣೆ ಬಾಕಿ ಇದೆ. ಇದರಿಂದಾಗಿ ಮತ್ತೆ ಬಾಲಚಂದ್ರ ಜಾರಕಿಹೊಳಿ ತೆಕ್ಕೆಗೆ ಬೆಳಗಾವಿಯ ಕೆ ಎಂ ಎಫ್ ಸರಿದಂತಾಗಿದೆ.