Select Your Language

Notifications

webdunia
webdunia
webdunia
webdunia

ರಮೇಶ್ ಜಾರಕಿಹೊಳಿ ಪುತ್ರ ರಾಜಕೀಯಕ್ಕೆ ಎಂಟ್ರಿ

ರಮೇಶ್ ಜಾರಕಿಹೊಳಿ ಪುತ್ರ ರಾಜಕೀಯಕ್ಕೆ ಎಂಟ್ರಿ
ಬೆಳಗಾವಿ , ಶನಿವಾರ, 27 ಏಪ್ರಿಲ್ 2019 (17:40 IST)
ಬೆಳಗಾವಿ ಜಿಲ್ಲಾ ರಾಜಕೀಯದಲ್ಲಿ ಜಾರಕಿಹೊಳಿ ಮನೆತನದ ಎರಡನೇಯ ಕುಡಿ ರಾಜಕಿಯಕ್ಕೆ ಎಂಟ್ರಿ ಪಡೆದುಕೊಂಡಂತಾಗಿದೆ. 
ಬೆಳಗಾವಿಯ ಕೆ ಎಮ್ ಎಫ್ ನ ನಿರ್ದೆಶಕರಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.  

14 ನಿರ್ದೆಶಕರ ಸ್ಥಾನಗಳ ಪೈಕಿ, ಏಪ್ರಿಲ್ 21 ರಂದು ಜಿಲ್ಲಾ ಹಾಲು ಒಕ್ಕೂಟದ ಚುಣಾವಣೆ ನಡೆದಿತ್ತು. ಚುಣಾವಣೆಯಲ್ಲಿ ರಮೇಶ್ ಜಾರಕಿಹೋಳಿ ಪುತ್ರ ಅಮರ ಜಾರಕಿಹೊಳಿ ಸೇರಿದಂತೆ 7 ನಿರ್ದೇಶಕರು ಅವಿರೋಧ ಆಯ್ಕೆಗೊಂಡಿದ್ದಾರೆ.

ಇನ್ನು ಉಳಿದ ಏಳು ಸ್ಥಾನಗಳಿಗೆ ಏಪ್ರಿಲ್ 28 ರಂದು‌ ಚುಣಾವಣೆ ನಡೆಯಲಿದೆ.

ಸರಕಾರದಿಂದ ಒಬ್ಬರು ಸದಸ್ಯರೂ ನಾಮ ನಿರ್ದೇಶಕರಾಗಿರುತ್ತಾರೆ. ಸಹಕಾರಿ ಇಲಾಖೆಯ ಉಪ ನಿಬಂಧಕರು, ರಾಜ್ಯ ಕೆ ಎಮ್ ಎಫ್ ನಿಂದ ಒಬ್ಬರು ನಿರ್ದೇಶಕರು, ಪಶುಸಂಗೋಪನಾ ನಿರ್ದೆಶಕರೊಬ್ಬರು  ಸೇರಿದಂತೆ 19 ಮತಗಳಿರುತ್ತವೆ.

ಸದ್ಯ ಕೆ ಎಮ್ ಎಫ್  ಅಧ್ಯಕ್ಷರಾಗಿ ವಿವೇಕರಾವ್ ಪಾಟೀಲ ಇದ್ದರು. ರಮೇಶ್ ಜಾರಕಿಹೊಳಿ ಪುತ್ರ ಅಮರ ಜಾರಕಿಹೊಳಿ ಕೆ ಎಮ್ ಎಫ್ ಗೆ ಆಯ್ಕೆ ಆಗುವ ಮುಖಾಂತರ ರಾಜಕೀಯಕ್ಕೆ ಪ್ರವೇಶ ಮಾಡಿದ್ದಾರೆ.

ಸಹೋದರ ಬಾಲಚಂದ್ರ ಜಾರಕಿಹೊಳಿ ಅವರ ಸಹಾಯವನ್ನ ಪಡೆದುಕ್ಕೊಂಡು ಮಗನ ರಾಜಕೀಯಕ್ಕೆ ಎಂಟ್ರಿ ಮಾಡಿಸಿದ್ದಾರೆ ರಮೇಶ್ ಜಾರಕಿಹೊಳಿ .




Share this Story:

Follow Webdunia kannada

ಮುಂದಿನ ಸುದ್ದಿ

ಸ್ಕಾರ್ಫ್ ಹಾಕಿಕೊಂಡ ಹುಡುಗಿ ಮಾಡಿದ ವಿವಾದ ಏನು?