Select Your Language

Notifications

webdunia
webdunia
webdunia
webdunia

ಜಾತಿ ಲೆಕ್ಕಾಚಾರದಲ್ಲಿ ಹೈ ವೋಲ್ಟೇಜ್ ಕದನವಾದ ಬಾದಾಮಿ

ಜಾತಿ ಲೆಕ್ಕಾಚಾರ
ಜಾತಿ ಲೆಕ್ಕಾಚಾರದಲ್ಲಿ ಹೈ ವೋಲ್ಟೇಜ್ ಕದನವಾದ ಬಾದಾಮಿಯಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಹೈದ್ರಾಬಾದ್ ಕನಾ೯ಟಕದ ವಾಲ್ಮೀಕಿ ಸಮುದಾಯ ತೊಡೆ ತಟ್ಟಿದೆ. 
ನಿನ್ನೆ ರಾತ್ರಿ ಬಾದಾಮಿ ಮತಕ್ಷೇತ್ರಕ್ಕೆ ಆಗಮಿಸಿದ ಹೈದ್ರಾಬಾದ್ ಕನಾ೯ಟಕದ  6  ಜಿಲ್ಲೆಗಳ ತಂಡಗಳು, ಬಾದಾಮಿಯಲ್ಲಿ ಸಿಎಂ ಸಿದ್ದರಾಮಯ್ಯ ಸೋಲಿಸಲು ರಾಮುಲು ಪರ ಪ್ರಚಾರಕ್ಕೆ ಆಗಮಿಸಿವೆ. ಹೈ-ಕ ವಾಲ್ಮೀಕಿ ಸಮುದಾಯದ  ವಿಭಾಗೀಯ  ಅಧ್ಯಕ್ಷ ನಂದಕುಮಾರ ಪಾಟೀಲ, ಕಾಯ೯ದಶಿ೯ ರಘುವೀರ ನಾಯಕ್ , ಯಾದಗಿರಿ ಜಿಲ್ಲಾದ್ಯಕ್ಷ ಮರಿಯಪ್ಪ ನಾಯಕ ಸೇರಿದಂತೆ 6 ಜಿಲ್ಲೆಗಳ ಪದಾಧಿಕಾರಿಗಳ ತಂಡಗಳು ಹೈದರಾಬಾದ್ ಕನಾ೯ಟಕದ ರಾಯಚೂರು, ಯಾದಗಿರ, ಕಲಬುಗಿ೯, ಕೊಪ್ಪಳ, ಬೀದರ, ಬಳ್ಳಾರಿ ಜಿಲ್ಲೆಗಳಿಂದ 100 ಕ್ಕೂ ಅಧಿಕ ಜನರ ತಂಡ ಬದಾಮಿಗೆ ಆಗಮಿಸಿದೆ. 
 
ಬಾದಾಮಿ, ಗುಳೇದಗುಡ್ಡ, ಶಿವಯೋಗಿ ಮಂದಿರದಲ್ಲಿ ಬೀಡು ಬಿಟ್ಟಿರುವ ತಂಡಗಳು. ಇಂದಿನಿಂದ ನಿರಂತರ 3 ದಿನಗಳ ಕಾಲ ಸಿಎಂ ವಿರುದ್ಧ ಪ್ರಚಾರಕ್ಕೆ ಇಳಿಯಲಿವೆ. ಮೀಸಲಾತಿ ವಿಚಾರದಲ್ಲಿ ವಾಲ್ಮೀಕಿ ಸಮುದಾಯಕ್ಕೆ ಅನ್ಯಾಯ ಮಾಡಿದ ಸಿಎಂ ವಿರುದ್ಧ ಗರಂ ಆಗಿರೋ ನಾಯಕರು.ಇದರಿಂದಾಗಿ ಬಾದಾಮಿ ಮತಕ್ಷೇತ್ರದ ವಾಲ್ಮೀಕಿ ಸಮುದಾಯದ ಮತ ಸೆಳೆಯಲು ಬಂದಿದ್ದ ಕಾಂಗ್ರೆಸ್ ನ ಸತೀಶ ಜಾರಕಿಹೊಳಿ ತಂತ್ರ ಬುಡಮೇಲಾದಂತಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಚೈತ್ರಾ ಕುಂದಾಪುರ ವಿರುದ್ಧ ಕೇಸ್ ದಾಖಲು