Publish Date: Wed, 02 May 2018 (06:22 IST)
Updated Date: Wed, 02 May 2018 (06:25 IST)
ಮೈಸೂರು : ಟ್ವಿಟ್ಟರ್ ನಲ್ಲಿ ಪ್ರಧಾನಿ ಮೋದಿ ಅವರಿಗೆ ಪಂಚ ಪ್ರಶ್ನೆಗಳನ್ನು ಕೆಳಿದ ವಿಚಾರಕ್ಕೆ ಗರಂ ಆಗಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಏಕವಚನದಲ್ಲ್ಲಿ ವಾಗ್ದಾಳಿ ನಡೆಸಿದ್ದಾರೆ.
ನಗರದ ಖಾಸಗಿ ಹೋಟೆಲ್‍ನಲ್ಲಿ ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಬಿ.ಎಸ್ ಯಡಿಯೂರಪ್ಪ ಅವರು,’ ಯಾವನ್ ರೀ ಅವನು ಸಿಎಂ ? ಪ್ರಧಾನಿಯನ್ನು ಪ್ರಶ್ನೆ ಮಾಡುವುದಕ್ಕೆ ಅವನಿಗೇನು ಯೋಗ್ಯತೆ ಇದೆ ? ತಾನೇ ನಿಂತ ನೆಲ ಕುಸಿದು ಚಾಮುಂಡೇಶ್ವರಿ ಬಿಟ್ಟು ಬಾದಾಮಿಗೆ ಓಡಿ ಹೋಗುತ್ತಿರುವ ಮನುಷ್ಯ. ಟ್ವಿಟ್ಟರ್ ಬಿಟ್ಟು, ನೀವು, ಪರಮೇಶ್ವರ್, ಮಲ್ಲಿಕಾರ್ಜುನ ಖರ್ಗೆ ಮೂವರೂ ಒಟ್ಟಿಗೆ ಪ್ರವಾಸ ಮಾಡಿ ನೋಡೋಣ. ನಿಮ್ಮ ಪಾರ್ಟಿ ಒಡೆದ ಮನೆಯಾಗಿದೆ. ಹೇಳುವವರು ಕೇಳುವವರು ಯಾರು ಇಲ್ಲದೆ ಛಿದ್ರವಾಗಿದೆ. ಒಬ್ಬಂಟಿಗನಾಗಿ ಅಲೆಯುತ್ತಿರುವ ಸಿದ್ದರಾಮಯ್ಯನಿಗೆ ಪ್ರಧಾನಿಯನ್ನು ಪ್ರಶ್ನಿಸುವ ನೈತಿಕ ಹಕ್ಕಿಲ್ಲ. ನಾಚಿಕೆಯಾಗಬೇಕು ಅವರ ನಡವಳಿಕೆಗೆ ಎಂದು ಸಿಎಂ ವಿರುದ್ಧ ಕಿಡಿಕಾರಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ