ರಂಗಭೂಮಿ ಶಾಶ್ವತ ಕಲೆ ಎಂದ ನಟ!

ಶನಿವಾರ, 12 ಜನವರಿ 2019 (15:46 IST)
ರಂಗಭೂಮಿ ಶಾಶ್ವತ ಕಲೆಯಾಗಿದೆ. ಸಿನಿಮಾ ಧಾರಾವಾಹಿಗಳ ಕಡೆ  ಜನರ ಆಸಕ್ತಿ ಕಡಿಮೆಯಾಗುತ್ತಿದೆ. ಹೀಗಂ ನಟ ರಮೇಶ ಭಟ್ ಹೇಳಿದ್ದಾರೆ.

ಚಲನಚಿತ್ರೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಜನರು ಮತ್ತೆ ರಂಗಭೂಮಿಯತ್ತ ವಾಲುತ್ತಿದ್ದಾರೆ. ರಂಗಭೂಮಿ ಸರ್ವ ಕಲಿಕಾ ಶ್ರೇಷ್ಠ, ಹವ್ಯಾಸಿ ಕಲಾವಿದರು ಹಾಗೂ ರಂಗಭೂಮಿಗೂ ವಾಣಿಜ್ಯ ಮೌಲ್ಯ ಬರಬೇಕು ಎಂದರು.

ಸಿನಿಮಾಗಳಲ್ಲಿ ಭಾವನೆಗಳಿಗೆ ಹೆಚ್ಚು ಒತ್ತು ಕೊಡಲಾಗದು ಎಂದ ಅವರು, ಭಾವನೆಗಳನ್ನು  ರಂಗಭೂಮಿಯಲ್ಲಿ  ಮಾತ್ರ ನೋಡಲು ಸಾಧ್ಯ ಎಂದೂ ಹೇಳಿದರು.


ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ತೋಟಗಾರಿಕೆ ಸಚಿವರನ್ನು ತರಾಟೆಗೆ ತೆಗೆದುಕೊಂಡ ರೈತ!