ತೋಟಗಾರಿಕೆ ಸಚಿವರನ್ನು ತರಾಟೆಗೆ ತೆಗೆದುಕೊಂಡ ರೈತ!

ಶನಿವಾರ, 12 ಜನವರಿ 2019 (15:39 IST)
ತೋಟಗಾರಿಕೆ ಸಚಿವರನ್ನು ರೈತರೊಬ್ಬರು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.

ವಿಜಯಪುರ ನಗರದಲ್ಲಿ ಸಾವಯವ ಮತ್ತು ಸಿರಿಧಾನ್ಯ ಮೇಳ ಉದ್ಘಾಟನೆ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ.
ಸಚಿವ ಎಂ.ಸಿ .ಮನಗೂಳಿ ಭಾಷಣ ಮುಕ್ತಾಯದ ವೇಳೆ ಘಟನೆ ನಡೆದಿದೆ. ಯಾವ ತಾಲೂಕಿನಲ್ಲಿ ಜಾನುವಾರುಗಳಿಗೆ ಮೇವು ಕೊಟ್ಟಿದ್ದೀರಿ ಎಂದು ರೈತರೊಬ್ಬರು ಸಚಿವರಿಗೆ ಪ್ರಶ್ನೆ ಮಾಡಿದರು.

ನಾಗಠಾಣ ಗ್ರಾಮದ ರೈತರೊಬ್ಬರು ಸಚಿವರನ್ನು ತರಾಟೆಗೆ ತೆಗೆದುಕೊಂಡರು. ರೈತ ಪ್ರಶ್ನೆಯಿಂದ ಎಚ್ಚೆತ್ತ ಸಚಿವರು ಮಾತನಾಡಿ, ಮೂರು ದಿನಗಳ ಹಿಂದೆ ಸಚಿವ ಸಂಪುಟ ಉಪ ಸಮಿತಿ ಬರ ಅಧ್ಯಯನ ನಡೆಸಿದ್ದೇವೆ. ಸಭೆ ಮಾಡಿ ಮೇವು ಒದಗಿಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ ಎಂದು ಉತ್ತರ ನೀಡಿದರು.ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಬಂಜಾರರು ಪತ್ರ ಚಳುವಳಿ ನಡೆಸಿದ್ಯಾಕೆ?