ಬಂಜಾರರು ಪತ್ರ ಚಳುವಳಿ ನಡೆಸಿದ್ಯಾಕೆ?

ಶನಿವಾರ, 12 ಜನವರಿ 2019 (15:12 IST)
ಅಖಿಲ ಕರ್ನಾಟಕ ಬಂಜಾರ ಸೇವಾಲಾಲ ಯುವ ಸೇನೆಯಿಂದ ಪತ್ರ ಚಳುವಳಿ ನಡೆಸಲಾಯಿತು.

ಹಾವೇರಿ ಜಿಲ್ಲೆಯ ರಾಣೆಬೆನ್ನೂರ ತಾಲೂಕಿನ ಅಂಚೇ ಕಚೇರಿ ಮೂಲಕ ಸರ್ಕಾರಕ್ಕೆ ಪತ್ರಗಳನ್ನು ರವಾನಿಸಸಲಾಗಿದೆ.

 ಇನ್ನು ಬಂಜಾರ ಸಮುದಾಯದವರು ಗುಳೆ ಹೋಗುವುದನ್ನು ತಡೆಗಟ್ಟಬೇಕು. ತಾಂಡಾಗಳ ಸಮಗ್ರ ಅಭಿವೃದ್ಧಿಗಾಗಿ ತಜ್ಞರ ತಂಡ ರಚಿಸಬೇಕು. ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ವರ್ಷಪೂರ್ತಿ ಕೆಲಸ ಸಿಗಬೇಕು. ಇನ್ನು ಹಲವು ಬೇಡಿಕೆಗಳುಳ್ಳ ಪತ್ರವನ್ನು ಸರ್ಕಾರಕ್ಕೆ ಕಳುಹಿಸಲಾಯಿತು.

ಈ ಸಂದರ್ಭದಲ್ಲಿ ಬಂಜಾರ ಸಮುದಾಯದ ಯುವಕರು ಪತ್ರ ಚಳುವಳಿ ಮೂಲಕ ಸರಕಾರದ ಗಮನ ಸೆಳೆಯುವ ಕೆಲಸ ಮಾಡಿದರು.ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಸಕ್ಕರೆ ನಾಡಿನಲ್ಲಿ ಇಂದು ಅಂಬಿ ನುಡಿ ನಮನ