Publish Date: Sat, 12 Jan 2019 (14:59 IST)
Updated Date: Sat, 12 Jan 2019 (15:01 IST)
ದಿವಂಗತ ಅಂಬರೀಷ್ ಹುಟ್ಟೂರು ಮಂಡ್ಯದಲ್ಲಿ ಶ್ರದ್ಧಾಂಜಲಿ ಸಭೆ ಆಯೋಜಿಸಲಾಗಿದೆ.
ಮಂಡ್ಯದ ಸರ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ನಡೆಯಲಿರುವ ಶ್ರದ್ಧಾಂಜಲಿ ಕಾರ್ಯಕ್ರಮಕ್ಕೆ ಕ್ಷಣಗಣನೆ ಆರಂಭಗೊಂಡಿದೆ.
ಸಂಜೆ 4 ಗಂಟೆಗೆ ಆದಿಚುಂನಗಿರಿ ಮಠಾಧೀಶ ನಿರ್ಮಲಾನಂದನಾಥಶ್ರೀ ಸಾನಿಧ್ಯದಲ್ಲಿ ನಡೆಯಲಿರೋ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಸಿಎಂ ಕುಮಾರಸ್ವಾಮಿ, ಸುಮಲತಾ ಅಂಬರೀಷ್, ಪುತ್ರ ಅಭಿಷೇಕ್ ಸೇರಿದಂತೆ ಹಲವು ರಾಜಕೀಯ ಹಾಗೂ ಚಿತ್ರರಂಗದ ಗಣ್ಯರು ಭಾಗಿಯಾಗಲಿದ್ದಾರೆ.
ಮಂಡ್ಯ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಕಾರ್ಯಕ್ರಮಕ್ಕೆ ಆಗಮಿಸಲಿರೋ ಸಾವಿರಾರು ಅಂಬಿ ಅಭಿಮಾನಿಗಳು
ಅಂಬಿ ಸ್ಮರಣೆಗೆ ಸಕಲ ಸಿದ್ಧತೆ ಪೂರ್ಣಗೊಂಡಿದೆ.
ಆತ್ಮಹತ್ಯೆಗೆ ಶರಣಾದ ಅಂಬಿ ಅಭಿಮಾನಿಗಳ ಕುಟುಂಬಕ್ಕೆ ಕಾರ್ಯಕ್ರಮದಲ್ಲಿ ಸಾಂತ್ವನ ಹೇಳಲಾಗುತ್ತಿದೆ.
ಅಂಬಿ ಸಾವಿನಿಂದ ಮನನೊಂದು ಇಬ್ಬರು ಅಂಬಿ ಅಭಿಮಾನಿಗಳು ಆತ್ಮಹತ್ಯೆಗೆ ಶರಣಾಗಿದ್ದರು.
ಇದೇ ವೇಳೆ ಕನಗನಮರಡಿ ಬಸ್ ದುರಂತದಲ್ಲಿ ಜಲಸಮಾಧಿಯಾದ 30 ಮಂದಿ ಮೃತ ಕುಟುಂಬಕ್ಕೂ ಆತ್ಮಸ್ಥೈರ್ಯ ತುಂಬುವ ಕಾರ್ಯ ನಡೆಯಲಿದೆ.