ಸಿದ್ದಗಂಗಾ ಶ್ರೀಗಳ ಹೆಲ್ತ್ ಬುಲೆಟಿನ್ ರಿಲೀಸ್!

ಶನಿವಾರ, 12 ಜನವರಿ 2019 (14:53 IST)
ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಕೊಂಚಮಟ್ಟಿನ ಚೇತರಿಕೆ ಕಂಡುಬಂದಿದೆ. ನಿನ್ನೆಯ ಆರೋಗ್ಯ ಸ್ಥಿತಿಯೇ ಇಂದೂ ಸಹ ಮುಂದುವರೆದಿದೆ. ಹೀಗಂತ ಶ್ರೀಗಳ ಆಪ್ತ ವೈದ್ಯ ಡಾ.ಪರಮೇಶ್ ಹೇಳಿಕೆ ನೀಡಿದ್ದಾರೆ.

ಸಿದ್ದಗಂಗಾ ಆಸ್ಪತ್ರೆಯಲ್ಲಿ ಡಾ.ಪರಮೇಶ್ ಹೇಳಿಕೆ ನೀಡಿದ್ದು, ಸೋಂಕಿನ ಅಂಶ ಕಡಿಮೆಯಾಗಿದ್ದು, ಪ್ರೋಟೀನ್ ಕೊರತೆ ಸಹ ಮುಂದುವರೆದಿದೆ. ಶ್ರೀಗಳು ಸ್ವಶಕ್ತಿಯಿಂದ ಉಸಿರಾಡಬೇಕಿದೆ. ಅವರಿಗೆ ಉಸಿರಾಡೋಕೆ ಬಿಟ್ರೇ 2 ಗಂಟೆ ಉಸಿರಾಡಿ ಸುಸ್ತಾಗುತ್ತಿದ್ದಾರೆ. ಆಕ್ಸಿಜನ್ ಕೊಟ್ಟ ಬಳಿಕ ಸಹಜ ಸ್ಥಿತಿಗೆ ಮರಳುತ್ತಾರೆ ಎಂದರು. 

ಶ್ರೀಗಳಿಗೆ ಇಮ್ಯುನಿಟಿ ಹೆಚ್ಚಾದರೆ ಬೇಗ ಗುಣಮುಖರಾಗ್ತಾರೆ. ಡಾ.ಮಂಜುನಾಥ್ ಸಲಹೆ ಮೇರೆಗೆ ಆಕ್ಸಿಜನ್ ಟ್ಯೂಬ್ ಬದಲಾಯಿಸಲಾಗಿದೆ. ಆಲ್ಬುಮಿನ್, ರಕ್ತ ಕಣಗಳು ಅವರ ದೇಹದಲ್ಲೇ ಉತ್ಪತ್ತಿಯಾಗಬೇಕಿದೆ. ನಾವೇ ಅವರ ದೇಹಕ್ಕೆ ಹೆಚ್ಚು ಪೂರೈಸಿದ್ದಲ್ಲಿ ಅದ್ರಿಂದ ಬೇರೆ ಎಫೆಕ್ಟ್ ಆಗುತ್ತೆ. ಒಮ್ಮೊಮ್ಮೆ ಪವಾಡದ ರೀತಿಯಲ್ಲಿ ಅವ್ರ ಆರೋಗ್ಯ ವೃದ್ದಿಯಾಗುತ್ತೆ ಎಂದರು. ಹಾಗೇ ವೃದ್ಧಿಯಾದರೆ ಆದಷ್ಟು ಬೇಗ ಗುಣಮುಖರಾಗ್ತಾರೆ ಎಂದು ಹೇಳಿದರು.


ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಕಡಲ ನಗರಿಯಲ್ಲಿ ರಿವರ್ ಫೆಸ್ಟಿವಲ್ ಸಂಭ್ರಮ