Select Your Language

Notifications

webdunia
webdunia
webdunia
webdunia

ಸಿದ್ದಗಂಗಾ ಆಸ್ಪತ್ರೆಗೆ ಭೇಟಿ ನೀಡಿದ ಕಾಶಿ ಜಗದ್ಗುರು

ಸಿದ್ದಗಂಗಾ ಆಸ್ಪತ್ರೆಗೆ ಭೇಟಿ ನೀಡಿದ ಕಾಶಿ ಜಗದ್ಗುರು
ತುಮಕೂರು , ಬುಧವಾರ, 9 ಜನವರಿ 2019 (19:46 IST)
ಕಾಶಿ ಜಗದ್ಗುರುಗಳು ಸಿದ್ದಗಂಗಾ ಆಸ್ಪತ್ರೆಗೆ ಭೇಟಿ ನೀಡಿ, ಸಿದ್ದಗಂಗಾ ಶ್ರೀಗಳ ಆರೋಗ್ಯ ವಿಚಾರಿಸಿದರು.
ಕಾಶಿ ಜಗದ್ಗುರು ತುಮಕೂರಿಗೆ ಭೇಟಿ ನೀಡಿದರು. ಡಾ. ಚಂದ್ರಶೇಖರ ಶಿವಚಾರ್ಯ ಸ್ವಾಮೀಜಿ ಭೇಟಿ ನೀಡಿ, ಸಿದ್ದಗಂಗಾ ಶ್ರೀಗಳ ಆರೋಗ್ಯ ವಿಚಾರಿಸಿದರು.

ಆ ಬಳಿಕ ಕಾಶಿ ಜಗದ್ಗುರುಗಳು ಹೇಳಿಕೆ ನೀಡಿದ್ದು,  ಶಿವಕುಮಾರ ಶ್ರೀಗಳ ಆರೋಗ್ಯದ ಸ್ಥಿತಿಗತಿಯ ಮಾಧ್ಯಮಗಳಿಂದ ನೋಡುತ್ತಿದ್ದೆವು. ಪ್ರತ್ಯಕ್ಷವಾಗಿ ನೋಡುವ ಉದ್ದೇಶದಿಂದ ಆಸ್ಪತ್ರೆಗೆ ಬಂದಿದ್ದೇವೆ. ಅವರ ಸೇವಕರು ಶ್ರೀಗಳ ಬಳಿಹೋಗಿ ಕಾಶೀಯಿಂದ‌ ಜಗದ್ಗುರು ಬಂದಿದ್ದಾರೆ ಎಂದಾಗ ಕಣ್ತೆರೆದು ನೋಡಿದ್ದು ಬಹಳ‌ಸಂತೋಷ ಅನ್ನಿಸ್ತಿದೆ ಎಂದರು.

ಶ್ರೀಗಳ ಆರೋಗ್ಯ ಹಾಗೂ ಭೌದ್ಧಿಕ ಸಿದ್ಧಿ‌ಬಹಳ ಚನ್ನಾಗಿದೆ. ಇದು ಭಕ್ತರಿಗೆ ಪುಣ್ಯ, ವಿಶೇಷ. ಇಷ್ಟು ದೀರ್ಘವಾಗಿ ಬದುಕಾದರೆ ಅವರ ತ್ರಿಕಾಲ ಲಿಂಗಪೂಜೆ ಕಾರಣ. ಲೋಕಕಲ್ಯಾಣದ ಕುರಿತಾದ ಅತ್ಯಂತ ಶಾಂತವಾದ ಯಾವುದೇ ಪ್ರಕಾರದ ದ್ವೇಷ ಅಸೂಯೆಗೆ ಆಸ್ಪದ ಕೊಡದ ಅವರ ಸಾತ್ವಿಕ ಮನಸ್ಸೇ ಕಾರಣ ಎಂದು ಬಣ್ಣಿಸಿದರು.

ಆದಷ್ಟು ಅವರು ಪೂರ್ಣ ಚೇತರಿಸಿಕೊಂಡು ಭಕ್ತರಿಗೆ ದರ್ಶನಾರ್ಶೀವಾದ ನೀಡವಂತಾಗಲಿ‌ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದರು.




Share this Story:

Follow Webdunia kannada

ಮುಂದಿನ ಸುದ್ದಿ

ಬಿಸಿಲನ್ನೂ ಲೆಕ್ಕಿಸದೇ ಪ್ರತಿಭಟನೆ ನಡೆಸಿದ್ರು!