ಕಡಲ ನಗರಿಯಲ್ಲಿ ರಿವರ್ ಫೆಸ್ಟಿವಲ್ ಸಂಭ್ರಮ

ಶನಿವಾರ, 12 ಜನವರಿ 2019 (14:38 IST)
ಮಂಗಳೂರು ನಲ್ಲಿ ಇಂದಿನಿಂದ ಎರಡು ದಿನಗಳ ಕಾಲ ರಿವರ್ ಫೆಸ್ಟಿವಲ್ ನಡೆಯುತ್ತಿದೆ.

ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು. ಟಿ. ಖಾದರ್ ರಿವರ್ ಫೆಸ್ಟಿವಲ್ ಗೆ ಚಾಲನೆ ನೀಡಿದರು. ಇದೇ ವೇಳೆ ಪಲ್ಗುಣಿ ನದಿಯಲ್ಲಿ ಜೆಟ್ ಸ್ಕಿ  ವಾಟರ್ ರೈಡ್ ಮಾಡುವುದರ ಮೂಲಕ ಸಚಿವರು ಗಮನ ಸೆಳೆದರು.

ಪ್ರವಾಸೋದ್ಯಮ ಉತ್ತೇಜಿಸುವ  ನಿಟ್ಟಿನಲ್ಲಿ ಇಂದಿನಿಂದ ಎರಡು ದಿನಗಳ ಕಾಲ ಪಲ್ಗುಣಿ  ನದಿ ದಂಡೆಯಲ್ಲಿ ನದಿ ಉತ್ಸವ ಆಯೋಜಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಅವರ ಮಾರ್ಗದರ್ಶನದಲ್ಲಿ ಈ ಉತ್ಸವ ಆಯೋಜಿಸಲಾಗಿದ್ದು, ಸಾರ್ವಜನಿಕರಿಂದಲೂ ಒಳ್ಳೆಯ ಸ್ಪಂದನೆ ವ್ಯಕ್ತವಾಗಿದೆ.

ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು. ಟಿ. ಖಾದರ್ ನದಿ ಉತ್ಸವ ಉದ್ಘಾಟಿಸಿ ಮಾತನಾಡಿದರು.
ರಾಜ್ಯದ ಕರಾವಳಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ವಿಫುಲ ಅವಕಾಶಗಳಿವೆ. ಹಲವಾರು ಬೀಚ್ ಗಳಿವೆ. ನದಿ ತೀರದಲ್ಲಿ  ಉತ್ಸವಗಳನ್ನು  ಆಯೋಜಿಸುವವರಿಗೆ ಉತ್ತೇಜನ ನೀಡಲಾಗುವುದು ಎಂದರು.

ನದಿ ಉತ್ಸವದ ಅಂಗವಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ಆಹಾರ ಮೇಳ, ಬೋಟಿಂಗ್, ಸ್ಯಾಂಡ್ ಸ್ಟೆಪ್  ಸರ್ಫಿಂಗ್ ಸೇರಿದಂತೆ ವಿವಿಧ ಜಲ ಕ್ರೀಡೆಗಳನ್ನು  ಆಯೋಜಿಸಲಾಗಿದೆ.


ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ರೈತರ ಸಾಲಮನ್ನಾ ಆಗಿದೆ ಎಂದು ರಾಜ್ಯ ಸರ್ಕಾರ ಬೊಗಳೆ ಬಿಡುತ್ತಿದೆ- ಆರ್.ಅಶೋಕ್ ಆರೋಪ