Select Your Language

Notifications

webdunia
webdunia
webdunia
Wednesday, 9 April 2025
webdunia

ಡಿವೈಡರ್​ಗೆ ಕಾರು ಢಿಕ್ಕಿ: ತಂದೆ, ಮಗ ಸ್ಥಳದಲ್ಲೇ ಸಾವು

ಡಿವೈಡರ್
ರಾಯಚೂರು , ಶುಕ್ರವಾರ, 11 ಜನವರಿ 2019 (19:00 IST)
ಡಿವೈಡರ್​ಗೆ ಕಾರು ಢಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ತಂದೆ, ಮಗನ ಸಾವ್ನಪ್ಪಿರುವ ಘಟನೆ ಸಂಭವಿಸಿದೆ.  
ರಾಯಚೂರು ಜಿಲ್ಲೆಯ ಸಿಂಧನೂರು ಹೊರವಲಯದಲ್ಲಿ ಈ ದುರ್ಘಟನೆ ನಡೆದಿದೆ.

ಪಟ್ಟಣದ ಹೊರವಲಯದ ರಾಘವೇಂದ್ರ ರೈಸ್ ಮಿಲ್ ಬಳಿ ದುರ್ಘಟನೆ ಸಂಭವಿಸಿದೆ. ರಾಯಚೂರಿನ ನಿವಾಸಿ ಹನೀಫ್ ಕುರೇಸಿ(60), ಅಬ್ದುಲ್ಲಾ(17) ಮೃತರೆಂದು ಗುರುತಿಸಲಾಗಿದೆ. ಅಖ್ತಾರ ಬಾನು, ಅಬ್ದುಲ್ ಲತೀಫ್ ಎಂಬುವರು ಗಂಭೀರ ಗಾಯಗೊಂಡಿದ್ದಾರೆ. ಅವರನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ. 

ಕಾರು ಚಾಲಕನ ನಿರ್ಲಕ್ಷ್ಯವೇ ಈ ಘಟನೆಗೆ ಕಾರಣ ಎಂದು‌ ಹೇಳಲಾಗುತ್ತಿದ್ದು, ಸಿಂಧನೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




Share this Story:

Follow Webdunia kannada

ಮುಂದಿನ ಸುದ್ದಿ

ಸಂಪುಟ ಉಪಸಮಿತಿ ನಡೆಗೆ ಸಚಿವ ಅಸಮಧಾನ!