Select Your Language

Notifications

webdunia
webdunia
webdunia
webdunia

ಕಾರಿನ ಗಾಜು ಒಡೆದು ಕದ್ದದ್ದು ಏನು ಗೊತ್ತಾ?

ಕಾರಿನ ಗಾಜು ಒಡೆದು ಕದ್ದದ್ದು ಏನು ಗೊತ್ತಾ?
ಬೆಂಗಳೂರು , ಗುರುವಾರ, 10 ಜನವರಿ 2019 (15:22 IST)
ಯುವಕರ ಗುಂಪೊಂದು ಕಾರಿನ ಗಾಜು ಒಡೆದು ಅಲ್ಲಿದ್ದ ಬೆಲೆ ಬಾಳುವ ವಸ್ತುಗಳನ್ನು ಎಗರಿಸಿದ್ದಾರೆ.
ಕಾರಿನಲ್ಲಿದ್ದ ಲ್ಯಾಪ್ ಟಾಪ್, ಪಾಸ್ಪೋರ್ಟ್ಗಳನ್ನು ದುಷ್ಕರ್ಮಿಗಳು ಕಳವು ಮಾಡಿ ಪರಾರಿಯಾಗಿರುವ ಘಟನೆ ಬೆಂಗಳೂರಿನ ಬಸವನಗುಡಿಯಲ್ಲಿ ನಡೆದಿದೆ.

ಹುಬ್ಬಳ್ಳಿಯಿಂದ ಬಂದಿದ್ದ ಖಾಸಗಿ ಕಂಪನಿಯೊಂದರ ಸಿಇಒ ನವೀನ್ ಝಾ ಅವರು ಗಾಂಧಿ ಬಜಾರ್ ರಾಘವೇಂದ್ರ ಸ್ವಾಮಿ ಮಠದ ಬಳಿ ಕಾರನ್ನು ನಿಲ್ಲಿಸಿ, ಶಾಪಿಂಗ್ಗೆ ಹೋಗಿ ಮರಳಿ ರಾತ್ರಿ 9 ರ ವೇಳೆ ವಾಪಸ್ ಕಾರಿನ ಬಳಿ ಬಂದಾಗ ಕಾರಿನ ಕಿಟಕಿ ಗಾಜುಗಳನ್ನು ಒಡೆದು, ಕಾರಿನಲ್ಲಿಟ್ಟಿದ್ದ ಲ್ಯಾಪ್ ಟಾಪ್, ಪಾಸ್ ಪೋರ್ಟ್ ಗಳನ್ನು ದುಷ್ಕರ್ಮಿಗಳು ಕದ್ದೊಯ್ದಿರುವುದು ಬೆಳಕಿಗೆ ಬಂದಿದೆ.

ಪೊಲೀಸ್ ಠಾಣೆಯಿಂದ ಸುಮಾರು 300ಮೀಟರ್ ದೂರದಲ್ಲಿಯೇ ಕಾರನ್ನು ಪಾರ್ಕ್ ಮಾಡಲಾಗಿದೆ. ಜನನಿಬಿಡ ಪ್ರದೇಶದಲ್ಲಿಯೇ ಕಳ್ಳರು ದುಷ್ಕೃತ್ಯವೆಸಗಿದ್ದಾರೆ ಎಂದು ನವೀನ್ ತಿಳಿಸಿದ್ದಾರೆ.

ತಕ್ಷಣ ಪೊಲೀಸ್ ಠಾಣೆಗೆ ತೆರಳಿದ ನವೀನ್ ಝಾ, ಘಟನೆ ಕುರಿತು ದೂರು ದಾಖಲಿಸಿದ್ದಾರೆ. ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮಾರವನ್ನು ಪರಿಶೀಲನೆ ನಡೆಸಿರುವ ಪೊಲೀಸರಿಗೆ ನಾಲ್ಕರಿಂದ ಐದು ಜನರ ಯುವಕರ ಗುಂಪೊಂದು ಕೃತ್ಯ ನಡೆಸಿರುವುದು ಕಂಡುಬಂದಿದ್ದು ಅವರಿಗಾಗಿ ಶೋಧ ನಡೆಸಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ದಿನೇಶ್ ಗುಂಡೂರಾವ್ ಪುಟ್ಗೋಸಿ ಹೇಳಿಕೆಗೆ ಟಾಂಗ್ ನೀಡಿದ ಅಶ್ವಥ್ ನಾರಾಯಣ್