Select Your Language

Notifications

webdunia
webdunia
webdunia
webdunia

ಅಪ್ರಾಪ್ತೆ ಮೇಲೆ ರೇಪ್: ಆರೋಪಿಗೆ ಜೈಲು ಶಿಕ್ಷೆ

ಅಪ್ರಾಪ್ತೆ ಮೇಲೆ ರೇಪ್: ಆರೋಪಿಗೆ ಜೈಲು ಶಿಕ್ಷೆ
ಮೈಸೂರು , ಬುಧವಾರ, 9 ಜನವರಿ 2019 (14:55 IST)
ಎಂಟು ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದ ವ್ಯಕ್ತಿಗೆ ವಿಶೇಷ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿದೆ.
 ಮೈಸೂರು ತಾಲ್ಲೂಕಿನ ಇಲವಾಲ ಗ್ರಾಮದಲ್ಲಿ 2016 ಜನವರಿ 1 ರಂದು ಗ್ರಾಮ ಎಂಟು ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದ ವ್ಯಕ್ತಿಗೆ ಇಲ್ಲಿನ ಫೋಕ್ಸೋ ವಿಶೇಷ ನ್ಯಾಯಾಲಯವು 10 ವರ್ಷಗಳ ಸೆರೆಮನೆ ವಾಸ ಹಾಗೂ 5 ಸಾವಿರ ರೂಗಳ ದಂಡ ವಿಧಿಸಿದೆ.

ನ್ಯಾಯಾಧೀಶರಾದ ಬಿ.ಎನ್.ಜಯಶ್ರೀಯವರು ಬಗ್ಗೆ ನಿನ್ನೆ ವಿಚಾರಣೆ ಪೂರ್ಣಗಳಿಸಿ ತೀರ್ಪು ನೀಡಿದರು. ಆರೋಪಿಯು ಕಳೆದ ಎಂಟು ವರ್ಷಗಳ ಹಿಂದೆ ಸಂಜೆ ಸಮಯದಲ್ಲಿ ತಿಪ್ಪೆಗುಂಡಿಗೆ ಕಸವನ್ನು ಸುರಿಯಲು ಹೋದ ಅಪ್ರಾಪ್ತ ಬಾಲಕಿಯನ್ನು ನಿರ್ಜನ ಪ್ರದೇಶಕ್ಕೆ ಎಳೆದುಕೊಂಡು ಹೋಗಿ ಅವಳ ಮೇಲೆ ಅತ್ಯಾಚಾರ ಎಸಗಿ ಪರಾರಿಯಾಗಿದ್ದ. ಬಗ್ಗೆ ಇಲವಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ದೂರಿನನ್ವಯ ಕಾರ್ಯಾಚರಣೆ ನಡೆಸಿದ ಇಲವಾಲ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೊಳಪಡಿಸಿದ್ದರು.

ಬಾಲಕಿಯ ಮೇಲೆ ಅತ್ಯಾಚಾರ ನಡೆದಿರುವುದು ಸಾಬೀತಾಗಿರುವ ಹಿನ್ನಲೆಯಲ್ಲಿ ನ್ಯಾಯಾಧೀಶರು ಆರೋಪಿಗೆ 10 ವರ್ಷಗಳ ಸೆರೆಮನೆ ವಾಸ, 5ಸಾವಿರ ರೂ.ಗಳ ದಂಡ ಹಾಗೂ ಸಂತ್ರಸ್ಥರ ನಿಧಿಯಿಂದ ಅತ್ಯಾಚಾರಕ್ಕೊಳಗಾದ ಬಾಲಕಿಗೆ 3 ಲಕ್ಷ ರೂ. ಗಳ ಪರಿಹಾರ ನೀಡುವಂತೆ ಆದೇಶಿಸಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಮೀಸಲಾತಿ ಎಲೆಕ್ಷನ್ ಗಿಮಿಕ್ ಎಂದ ಸಿದ್ದರಾಮಯ್ಯ