Select Your Language

Notifications

webdunia
webdunia
webdunia
webdunia

ಅಯೋಧ್ಯೆ ವಿಚಾರಣೆ ಜನವರಿ 29ಕ್ಕೆ ಮುಂದೂಡಿಕೆ

ಅಯೋಧ್ಯೆ ವಿಚಾರಣೆ ಜನವರಿ 29ಕ್ಕೆ ಮುಂದೂಡಿಕೆ
ನವದೆಹಲಿ , ಗುರುವಾರ, 10 ಜನವರಿ 2019 (12:17 IST)
ನವದೆಹಲಿ : ಅಯೋಧ್ಯೆಯಲ್ಲಿ ರಾಮ ಜನ್ಮಭೂಮಿ ಭೂ ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಯನ್ನು ಮುಂದೂಡಲಾಗಿದೆ.


ಕಳೆದ ಎರಡು ದಿನಗಳ ಹಿಂದಷ್ಟೇ ಸಿಜೆಐ ರಂಜನ್ ಗೊಗೊಯಿ, ಅಯೋಧ್ಯೆ ವಿಚಾರಣೆಗಾಗಿ ಸಾಂವಿಧಾನಿಕ ಪೀಠವನ್ನು ರಚನೆ ಮಾಡಿದ್ದರು. ಸಿಜೆಐ ರಂಜನ್ ಗೊಗೊಯಿ, ನ್ಯಾ.ಎಸ್. ಎ. ಬೊಬ್ಡೆ, ನ್ಯಾ.ಎನ್. ವಿ. ರಮಣ, ಉದಯ್ ಉಮೇಶ್ ಲಲಿತ್ ಹಾಗೂ ಡಿ.ವೈ ಈ ಪೀಟದಲ್ಲಿದ್ದರು. ಆದರೆ ನ್ಯಾಯಮೂರ್ತಿ ಉದಯ್ ಲಲಿತ್ ಅವರು ಈ ಪೀಠದಲ್ಲಿರುವುದಕ್ಕೆ ವಕೀಲ ರಾಜೀವ್ ಧವನ್ ಎನ್ನುವವರು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಹಿನ್ನಲೆಯಲ್ಲಿ ನ್ಯಾಯಮೂರ್ತಿ ಉದಯ್ ಲಲಿತ್ ಅವರು ಹಿಂದೆ ಸರಿದಿದ್ದಾರೆ.


ಆದಕಾರಣ ಸಿಜೆಐ ರಂಜನ್ ಗೊಗೊಯಿ ಅವರು  ಸಾಂವಿಧಾನಿಕ ಪೀಠವನ್ನು ಪುನರ್ ರಚನೆ ಮಾಡಿಬೇಕಾಗಿರುವುದರಿಂದ  ರಾಮ ಜನ್ಮಭೂಮಿ-ಬಾಬ್ರಿ ಮಸೀದಿ ಭೂ ವಿವಾದ ಪ್ರಕರಣದ ವಿಚಾರಣೆಯನ್ನು ಜನವರಿ 29ಕ್ಕೆ ಮುಂದೂಡಲಾಗಿದೆ ಎಂದು ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಬೋನಿಗೆ ಬಿದ್ದ ಹಂತಕ ಚಿರತೆ